ಬಿಗ್ ಬಾಸ್ ಈ ವರೆಗೆ ಅನೇಕ ಲವ್ ಬರ್ಡ್ಸ್, ಸ್ನೇಹ ಜೀವಿಗಳನ್ನು ಕಂಡಿವೆ. ಸೀಸನ್ 10 ನಲ್ಲೂ ಸಂಗೀತಾ- ಕಾರ್ತಿಕ್ ಸ್ನೇಹ ಕಂಡು ಎಲ್ಲರೂ ಮೆಚ್ಚಿದ್ದರು.ಆರಂಭದಲ್ಲಿ ಇವರಿಬ್ಬರ ಬಾಂಧವ್ಯ ಎಲ್ಲರ ಸೆಳೆದಿತ್ತು. ಆದ್ರೆ, ಈಗ ಬದಲಾಗಿದೆ.
ಸಂಗೀತಾ ಶೃಂಗೇರಿ ಮತ್ತು ಕಾರ್ತಿಕ್ ಮಹೇಶ್ ನಡುವಿನ ಸ್ನೇಹ ಮೊದಲಿನಂತಿಲ್ಲ. ಈಗ ಬದ್ಧ ವೈರಿಗಳಂತೆ ವರ್ತಿಸುತ್ತಿದ್ದಾರೆ.
ಈ ದ್ವೇಷದ ಕಿಡಿ ಎಲ್ಲಿಯವರೆಗೆ ಹಬ್ಬಿದೆ ಎಂಬುದಕ್ಕೆ ಈ ವಾರದ ಕಥೆ ಸಾಕ್ಷಿಯಾಗಲಿದೆ.
Advertisement. Scroll to continue reading.
ಫ್ರೆಂಡ್ ಶಿಪ್ ಉಳಿದಿಲ್ಲ :
‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್ ಒಂದು ಪ್ರಶ್ನೆ ಕೇಳಿದ್ದಾರೆ. ‘ಕೊನೆತನಕ ಇರುವ ಫ್ರೆಂಡ್ ಶಿಪ್ ಯಾವುದು? ಇಲ್ಲೇ ಬಿಟ್ಟು ಹೋಗುವ ಫ್ರೆಂಡ್ ಶಿಪ್ ಯಾವುದು’ ಎಂದು ಸುದೀಪ್ ಕೇಳಿದ್ದಕ್ಕೆ ಎಲ್ಲರೂ ನೇರ ಉತ್ತರ ನೀಡಿದ್ದಾರೆ.
ಸಂಗೀತಾ ಕಾರ್ತಿಕ್ ಜೊತೆಗಿನ ಸ್ನೇಹದ ಬಗ್ಗೆ ಹೇಳಿದ್ದಾರೆ.
‘ನನಗೆ ನೋವಾಗುತ್ತದೆ ಎಂಬುದು ಗೊತ್ತಿದ್ದರೂ ಕೂಡ ಕಾರ್ತಿಕ್ ಬಂದು ನೋವು ಮಾಡುತ್ತಾರೆ. ನಮ್ಮ ಫ್ರೆಂಡ್ಶಿಪ್ ಉಳಿದಿಲ್ಲ. ಹೊರಗೆ ಹೋದಮೇಲೆ ಕೂಡ ಅದನ್ನು ಪ್ಯಾಚಪ್ ಮಾಡಿಕೊಳ್ಳಲು ನಾನು ನೋಡಲ್ಲ’ ಎಂದು ಹೇಳಿದ್ದಾರೆ.
Advertisement. Scroll to continue reading.
ಸದ್ಯ ಬಿಗ್ ಬಾಸ್ ಸೀಸನ್ 10 ಫೈನಲ್ ನತ್ತ ದಾಪುಗಾಲಿಡುತ್ತಿದೆ. ಸ್ಪರ್ಧೆಗಳು ಜೋರಾಗೆ ನಡೆಯುತ್ತಿವೆ. ಜೊತೆಗೆ ಜಗಳಗಳು, ಮನಸ್ತಾಪವೂ ಇದೆ. ಈ ನಡುವೆ ಸಂಗೀತಾ ಶೃಂಗೇರಿ ನೇರವಾಗಿ ಫಿನಾಲೆ ಪ್ರವೇಶಿಸಿದ್ದಾರೆ.