ಕಾಪು : ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ಭಾರತ್ ನಗರದಲ್ಲಿ ನಡೆದಿದೆ.
ಗಣೇಶಪ್ಪ ಕನಿಕೇರ ಹಾನಗಲ್ ತಾಲೂಕು, ಹಾವೇರಿ ಇವರ ಮಗ ಶಿವರಾಜ ಕನಿಕೇರ(33) ಮೃತ ಕಾರ್ಮಿಕ.
Advertisement. Scroll to continue reading.
ಸುಮಾರು 5-6 ವರ್ಷಗಳ ಹಿಂದೆ ಕೂಲಿ ಕೆಲಸಕ್ಕಾಗಿ ಕಾಪುವಿಗೆ ಬಂದಿದ್ದು ಮಲ್ಲಾರು ಗ್ರಾಮದ ಕೊಂಬಗುಡ್ಡೆ ಎಂಬಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು.
ಸೋಮವಾರ ಶಿವರಾಜ ಕನಿಕೇರ ಮಧ್ಯಾಹ್ನ 3:00 ಗಂಟೆಯ ಸುಮಾರಿಗೆ ಕಾಪುವಿನ ಭಾರತ್ ನಗರದಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದರು. ಈ ಸಮಯ ಪಿಟ್ಸ್ ಬಂದು ಕೆಳಗೆ ಬಿದ್ದಿದ್ದಾರೆ. ಅವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಶಿವರಾಜ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.