ಅಯೋಧ್ಯೆ : ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ನಂತರ ಇಂದು ರಾಮ ಭಕ್ತರಿಗಾಗಿ ದೇವಾಲಯವನ್ನು ತೆರೆಯಲಾಗಿದೆ. ರಾಮಲಲ್ಲಾನ ದರ್ಶನ ಪಡೆಯಲು ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಮೊದಲ ದಿನವೇ 2 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ ಎಂದು ವರದಿಯಾಗಿದೆ.
ನೂಗುನುಗ್ಗಲು ಹಿನ್ನೆಲೆ ಈ ವಿಚಾರಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ವತಃ ಸಿಎಂ ಯೋಗಿ ಅಯೋಧ್ಯೆ ತಲುಪಿದ್ದಾರೆ. ಇದರೊಂದಿಗೆ ಅವರು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರ ಸಂಕೀರ್ಣದ ವೈಮಾನಿಕ ಸಮೀಕ್ಷೆ ನಡೆಸಿದರು.
ರಾಮಲಲ್ಲಾನ ದರ್ಶನ ಪಡೆಯಲು ರಾಮ ಮಂದಿರಕ್ಕೆ ಅಪಾರ ಸಂಖ್ಯೆಯಲ್ಲಿ ರಾಮಭಕ್ತರು ಆಗಮಿಸುತ್ತಿದ್ದಾರೆ. ರಾಮಮಂದಿರದಲ್ಲಿ ರಾಮಭಕ್ತರ ದಂಡೇ ನೆರೆದಿದೆ.
Advertisement. Scroll to continue reading.
ರಾಮಲಲ್ಲಾನ ದರ್ಶನ ಪಡೆಯಲು ಬೆಳಗಿನ ಜಾವ 3 ಗಂಟೆಯಿಂದಲೇ ಭಕ್ತರು ದೇವಸ್ಥಾನದಲ್ಲಿ ಸಾಲುಗಟ್ಟಿ ನಿಂತಿದ್ದರು.
ಇಂದು ಮಧ್ಯಾಹ್ನದವರೆಗೆ ಮೂರು ಲಕ್ಷದ ವರೆಗೆ ಭಕ್ತರು ಭೇಟಿ ನೀಡಿದ್ದಾರೆ. ದಿನದ ಅಂತ್ಯದ ವೇಳೆಗೆ ಸುಮಾರು ಐದು ಲಕ್ಷ ಭಕ್ತರು ಭೇಟಿ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಲು ಅಯೋಧ್ಯೆಯಲ್ಲಿ ಉಳಿದಿದ್ದಾರೆ. ಎಲ್ಲಾ ವ್ಯವಸ್ಥೆಗಳು ನಿಯಂತ್ರಣದಲ್ಲಿವೆ. ಎಂಟು ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.
Advertisement. Scroll to continue reading.