ಅಯೋಧ್ಯೆ : ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ನಂತರ ಇಂದು ರಾಮ ಭಕ್ತರಿಗಾಗಿ ದೇವಾಲಯವನ್ನು ತೆರೆಯಲಾಗಿದೆ. ರಾಮಲಲ್ಲಾನ ದರ್ಶನ ಪಡೆಯಲು ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಮೊದಲ ದಿನವೇ 2 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದಾರೆ ಎಂದು ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಜನವರಿ 22ರಂದು ರಾಮ ಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠೆ ಮಾಡಿದ್ದಾರೆ. ಅರ್ಚಕ ಅರುಣ್ ದೀಕ್ಷಿತ್ ಮಾರ್ಗದರ್ಶನದಲ್ಲಿ ಪ್ರಾಣಪ್ರತಿಷ್ಠೆ ಶಾಸ್ತ್ರೋಕ್ತವಾಗಿ ನೆರವೇರಿದೆ. ಹೊಸದಾಗಿ ಪ್ರತಿಷ್ಠಾಪಿಸಲಾಗಿರುವ ವಿಗ್ರಹ ರಾಮ ಲಲ್ಲಾ ಹೆಸರಿನಿಂದ ಅಲ್ಲ, ‘ಬಾಲಕ ರಾಮ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಾನೆ ಎಂದು ಅರುಣ್ ದೀಕ್ಷಿತ್ ಹೇಳಿದ್ದಾರೆ.
5 ವರ್ಷದ ಬಾಲಕ :
Advertisement. Scroll to continue reading.
1949ರಲ್ಲಿ ಪ್ರತ್ಯಕ್ಷಗೊಂಡ ಹಾಗೂ ಇದುವರೆಗೆ ಆಯೋಧ್ಯೆಯಲ್ಲಿ ಪೂಜಿಸಲ್ಪಡುತ್ತಿದ್ದ ರಾಮ ಲಲ್ಲಾನನ್ನೂ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ರಾಮ ಲಲ್ಲಾ ಹಾಗೇ ಇರಲಿದ್ದಾರೆ. ಹೊಸ ವಿಗ್ರಹ 5 ವರ್ಷದ ಬಾಲಕ ರಾಮನಾಗಿರುವ ಕಾರಣ ಬಾಲಕ ರಾಮ ಎಂದು ಕರೆಯಲ್ಪಡುತ್ತಾನೆ ಎಂದು ಅರುಣ್ ದೀಕ್ಷಿತ್ ಹೇಳಿದ್ದಾರೆ.
ಬಾಲಕರಾಮನ ನೋಡಿದಾಗ ನನ್ನ ಕಣ್ಣುಗಳು ತುಂಬಿ ಬಂತು. ಮುಖದಲ್ಲಿನ ಮಂದಹಾಸ, ದೈವೀಕ ಕಳೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಇದನ್ನು ಅನುಭವಿಸಲು ಬಾಲಕ ರಾಮನ ದರ್ಶನ ಪಡೆಯಬೇಕು ಎಂದಿದ್ದಾರೆ.
50 ರಿಂದ 60 ಪ್ರಾಣಪ್ರತಿಷ್ಠೆಯನ್ನು ಅತ್ಯಂತ ಶಾಸ್ತ್ರೋಕ್ತವಾಗಿ ನೇರವೇರಿಸಿದ್ದೇನೆ. ಆದರೆ ರಾಮ ಮಂದಿರದ ಪ್ರಾಣಪ್ರತಿಷ್ಠೆ ಅಧ್ಯಾತ್ಮಿಕ ಹಾಗೂ ಸರ್ವೋಚ್ಚ ಎಂದು ಅರುಣ್ ದೀಕ್ಷಿತ್ ಹೇಳಿದ್ದಾರೆ.
ಅಧ್ಯಯನ ನಡೆಸಿ ತೊಡುಗೆ ವಿನ್ಯಾಸ :
Advertisement. Scroll to continue reading.
ಬಾಲಕ ರಾಮನಿಗೆ ತೊಡಿಸಿರುವ ಆಭರಣ, ಕಿರೀಟಿಗಳನ್ನು ವಾಲ್ಮೀಕಿ ರಾಮಾಯಣ, ರಾಮಚರಿತ ಮಾನಸ, ಆಧ್ಯಾತ್ಮ ರಾಮಾಯಣದಲ್ಲಿ ಅಧ್ಯಯನ ನಡೆಸಿ ವಿನ್ಯಾಸಗೊಳಿಸಲಾಗಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.
ಆಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡುವ ಭಕ್ತರಿಗೆ ಎಲ್ಲಾ ವ್ಯವಸ್ಥೆಗಳನ್ನು ಟ್ರಸ್ಟ್ ಮಾಡಿದೆ. ಬಾಲಕ ರಾಮನ ಮೂರ್ತಿಯನ್ನು ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ್ದಾರೆ.
Advertisement. Scroll to continue reading.