ಸಿನಿಮಾ

ಖ್ಯಾತ ಸಂಗೀತ ನಿರ್ದೇಶಕ  ಇಳಯರಾಜಾ ಪುತ್ರಿ, ಗಾಯಕಿ ಭವತಾರಿಣಿ ನಿಧನ

2

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಅವರ ಪುತ್ರಿ ಭವತಾರಿಣಿ  ಇಂದು ನಿಧನರಾದರು. ಅವರು ಲಿವರ್ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ಶ್ರೀಲಂಕಾಕ್ಕೆ ತೆರಳಿದ್ದರು. ಆದರೆ, ಶ್ರೀಲಂಕಾದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಭವತಾರಿಣಿಗೆ 47 ವರ್ಷ ವಯಸ್ಸಾಗಿತ್ತು.

ಆಕೆಯ ಪಾರ್ಥಿವ ಶರೀರವನ್ನು ಜನವರಿ 26 ರಂದು ಚೆನ್ನೈಗೆ ತರಲಾಗುತ್ತಿದೆ. ಅಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಅವರು ಪತಿ ಬಾಲಾಜಿ ಅವರನ್ನು ಅಗಲಿದ್ದಾರೆ.

ಇಳಯರಾಜಾ ಅವರ ಪುತ್ರಿಯಾಗಿರುವ ಭವತಾರಿಣಿ, ಕಾರ್ತಿಕ್ ರಾಜಾ ಹಾಗೂ ಸಂಗೀತ ನಿರ್ದೇಶಕ ಯುವನ್‌ ಶಂಕರ್‌ ರಾಜಾ ಅವರ ಸಹೋದರಿಯಾಗಿದ್ದರು. ಇಳಯರಾಜ ಅವರ ಪುತ್ರಿ ಭವತಾರಿಣಿ ಹಿನ್ನೆಲೆ ಗಾಯಕಿ ಮತ್ತು ಸಂಗೀತ ಸಂಯೋಜಕಿಯೂ ಆಗಿದ್ದರು. 

Advertisement. Scroll to continue reading.

ಅವರು ‘ಭಾರತಿ’ ಚಿತ್ರದ ‘ಮಾಯಿಲ್ ಪೋಲ ಪೊನ್ನು ಒನ್ನು’ ತಮಿಳು ಹಾಡಿಗಾಗಿ ಅತ್ಯುತ್ತಮ ಹಿನ್ನಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದರು.

2002 ರಲ್ಲಿ, ಅವರು ರೇವತಿ ನಿರ್ದೇಶನದ ‘ಮಿತ್ರ್, ಮೈ ಫ್ರೆಂಡ್’ ಗೆ ಸಂಗೀತ ನಿರ್ದೇಶಕರಾಗಿದ್ದರು. ಆ ನಂತರ ಅವರು ‘ಫಿರ್ ಮಿಲೇಂಗೆ’ ಮತ್ತು ಕೆಲವೊಂದು ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಭವತಾರಿಣಿ ಅವರ ಕೊನೆಯ ಮ್ಯೂಸಿಕ್ ಆಲ್ಬಂ ಮಲಯಾಳಂ ಚಿತ್ರ ‘ಮಾಯಾನದಿ’ ಆಗಿತ್ತು. ಅವರು ತಮಿಳು ಚಲನಚಿತ್ರಗಳಾದ ‘ಕಾದಲುಕ್ಕು ಮರಿಯದೈ’, ‘ಭಾರತಿ’, ‘ಅಳಗಿ’, ‘ಫ್ರೆಂಡ್ಸ್’, ‘ಪಾ’, ‘ಮಂಕಥಾ’ ಮತ್ತು ‘ಅನೇಗನ್’ ಸೇರಿದಂತೆ ಹಲವು ಹಾಡುಗಳನ್ನು ಹಾಡಿದ್ದಾರೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com