ಬ್ರಹ್ಮಾವರ : ಉಪ್ಪೂರು ಗ್ರಾಮದಲ್ಲಿ ಗ್ರಾಮದ 8 ಕೇಂದ್ರಗಳಲ್ಲಿ ವಿವಿಧ ಗ್ರಾಮ ಪಂಚಾಯತ್ ಉಪ್ಪೂರು ಹಾಗೂ ಪಶು ಆಸ್ಪತ್ರೆ ಬ್ರಹ್ಮಾವರ ಹಾಗೂ ಗ್ರಾಮದ 8 ಇತರ ಸಂಘಗಳ ಸಂಯೋಜನೆಯಿಂದ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ ನಡೆಯಿತು.
ಶಿಬಿರವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಅವರು ಲಸಿಕೆಯ ಕಿಟ್ ಅನ್ನು ವೈದ್ಯರಿಗೆ ಹಸ್ತಾಂತರಿಸಿ ಉದ್ಘಾಟಿಸಿದರು.
Advertisement. Scroll to continue reading.
ಮುಖ್ಯ ಪಶು ವೈದ್ಯಾಧಿಕಾರಿ ಡಾ. ಪ್ರದೀಪ್ ಕೊಂಡಾಜೆ ಅವರು ಲಸಿಕೆ ನೀಡಿ ಶಿಬಿರಕ್ಕೆ ಚಾಲನೆ ನೀಡಿದರು.
ನಂತರ ಪಶು ಆಸ್ಪತ್ರೆ ವೈದ್ಯರ 3 ತಂಡಗಳೊಂದಿಗೆ ಗ್ರಾಮದ 8 ಕೇಂದ್ರಗಳಲ್ಲಿ ವಿವಿಧ ಸಮಯದಲ್ಲಿ ಸುಮಾರು 285 ಸಾಕು ನಾಯಿಗಳಿಗೆ ಲಸಿಕೆ ನೀಡಲಾಯಿತು.
ವೇದಿಕೆಯಲ್ಲಿ ಶಿಬಿರ ಸಂಪೂರ್ಣ ಸಂಯೋಜನೆ ಮಾಡಿದ ಯುವ ವಿಚಾರ ವೇದಿಕೆಯ ಅಧ್ಯಕ್ಷ ದಿನೇಶ್ ಶೆಟ್ಟಿ, ಪಂಚಾಯತ್ ಉಪಾಧ್ಯಕ್ಷ ಶ್ರೀ ಸತೀಶ್ ಪೂಜಾರಿ, ಯುವಜನ ಮಂಡಲ ಉಪ್ಪೂರು ಅಧ್ಯಕ್ಷ ಜಯಕರ್ ಉಪ್ಪೂರು, ಜನತಾ ವ್ಯಾಯಾಮ ಶಾಲೆ ಅಧ್ಯಕ್ಷ ಅರುಣ್, ಸವಿನಯ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸುಕೇಶ್, ಗೆಳೆಯರ ಬಳಗ ಅಧ್ಯಕ್ಷ ಸುಕೇಶ್, ಅಮ್ಮುಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ, 1ನ್ ವಾರ್ಡ ಅಭಿವೃದ್ದಿ ಸಮಿತಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಅಶ್ವಿನ್ ರೋಚ್, ಗ್ರಾಮ ಪಂಚಾಯತ್ ಸದಸ್ಯ ಧರಣೆಷ್, ವಿಶ್ವಾಸ್ ಪ್ರೆಂಡ್ಸ್ ಅಧ್ಯಕ್ಷ ಪುರುಷೋತ್ತಮ್, ಗ್ರಾಮ ಪಂಚಾಯತ್ ಸಿಬ್ಬಂದಿ, ಪಶು ಆಸ್ಪತ್ರೆ ತಂಡದ ಸಿಬ್ಬಂದಿ ಉಪಸ್ಥಿತರಿದ್ದರು.
ಯೋಗೀಶ್ ಗಾಣಿಗ ಕೊಳಲಗಿರಿ ಸ್ವಾಗತಿಸಿ, ವಂದಿಸಿದರು. ಸುಬ್ರಹ್ಮಣ್ಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.