ಬಿಗ್ ಬಾಸ್ ಕನ್ನಡ ಸೀಸನ್ 10 ರ ಗ್ರ್ಯಾಂಡ್ ಫಿನಾಲೆ ಶುರುವಾಗಿದೆ. 113 ದಿನಗಳ ದೊಡ್ಮನೆ ಬಾಗಿಲು ಫಿನಾಲೆಯೊಂದಿಗೆ ಮುಚ್ಚಲಿದೆ. ವಿಜೇತರು ಯಾರಾಗಲಿದ್ದಾರೆ ಎಂಬ ಚರ್ಚೆಯೊಂದಿಗೆ ಕುತೂಹಲ ಹುಟ್ಟಿದೆ.
ವರ್ತೂರು ಸಂತೋಷ್, ಸಂಗೀತಾ, ಕಾರ್ತಿಕ್, ಡ್ರೋನ್ ಪ್ರತಾಪ್, ವಿನಯ್, ತುಕಾಲಿ ಸಂತೋಷ್ ಬಿಗ್ ಫಿನಾಲೆಗೆ ಬಂದಿದ್ದರು.
ಶನಿವಾರ ಬಿಗ್ ಬಾಸ್ ಕನ್ನಡ 10 ರ ಟಾಪ್ 6 ಕಂಟೆಸ್ಟಂಟ್ ಮನೆಯಿಂದ ಎಲಿಮಿನೇಟ್ ಆಗಿದ್ದರು.
ಹೌದು, ತುಕಾಲಿ ಸಂತೋಷ್ ಫಿನಾಲೆಯಲ್ಲಿ ಮೊದಲು ಎಲಿಮಿನೇಟ್ ಆಗಿದ್ದರು.
ಭಾನುವಾರ ವರ್ತೂರ್ ಸಂತೋಷ್ ಹೊರ ಬಂದಿದ್ದಾರೆ ಅದೂ ನಾಲ್ಕನೇ ರನ್ನರ್ ಅಪ್ ಆಗಿ.
Advertisement. Scroll to continue reading.
3 ನೇ ರನ್ನರ್ ಅಪ್ ಸ್ಥಾನಕ್ಕೆ ವಿನಯ್ ತೃಪ್ತಿ ಪಟ್ಟುಕೊಳ್ಳಬೇಕಾಯಿತು.
ಇದೀಗ ಸಂಗೀತಾ ಶೃಂಗೇರಿ ಸೆಕೆಂಡ್ ರನ್ನರ್ ಆಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತನ್ನದೇ ಆದ ಹವಾ ಹುಟ್ಟು ಹಾಕಿದ್ದ ಸಂಗೀತಾ ಸೋಶಿಯಲ್ ಮೀಡಿಯಾದಲ್ಲೂ ಸಕತ್ ಸದ್ದು ಮಾಡುತ್ತಿದ್ದರು.
ಸಂಗೀತಾ ತಮ್ಮದೇ ಆದ ಅಭಿಮಾನ ಬಳಗ ಹೊಂದಿದ್ದಾರೆ. ಸಂಗೀತಾ ಗೆಲ್ಲುತ್ತಾರೆ ಎಂಬ ಚರ್ಚೆ ಹುಟ್ಟಿತ್ತು. ಆದರೆ, ಈಗ ಅವರು ಸೆಕೆಂಡ್ ರನ್ನರ್ ಆಗಿದ್ದಾರೆ.
ವಿನಯ್ ಜೊತೆಗಿನ ಜಗಳ, ಕಾರ್ತಿಕ್ ಸ್ನೇಹ, ನಂತರದ ವೈಮನಸ್ಯ ಸಕತ್ ಸದ್ದು ಮಾಡಿತ್ತು.
ಸದ್ಯ ಕಾರ್ತಿಕ್, ಡ್ರೋನ್ ಪ್ರತಾಪ್ರಲ್ಲಿ ಯಾರು ವಿನ್ನರ್ ಆಗ್ತಾರೆ ಎಂಬುದು ಸ್ವಲ್ಪ ಸಮಯದಲ್ಲಿ ತಿಳಿಯಲಿದೆ.