ರಾಷ್ಟ್ರೀಯ

ಪ್ರತಿ ವರ್ಷದಂತೆ ಈ ವರ್ಷವೂ ಗಮನ ಸೆಳೆದಿದೆ ವಿತ್ತ ಸಚಿವೆ ಸೀರೆ

1

ನವದೆಹಲಿ : ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್‌   ಮಂಡನೆಯಾಗಿದೆ. ಸತತ 6ನೇ ಬಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್ ಮಂಡಿಸಿದರು. ಈ ಬಾರಿ ನೀಲಿಬಣ್ಣದ ಸೀರೆಯುಟ್ಟು ಬಜೆಟ್‌ ಮಂಡಿಸಿದರು.

ಬೆಳಗ್ಗೆ 11 ಗಂಟೆಗೆ ಬಜೆಟ್‌ ಮಂಡಿಸಲಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಈ ಬಾರಿ ಸೀರೆ ಬಣ್ಣದ ಸೀರೆಯಲ್ಲಿ ಬಜೆಟ್‌ ಮಂಡಿಸಿದರು.

ಪ್ರತಿ ಬಾರಿ ಬಜೆಟ್‌ನಲ್ಲೂ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸುವ ಬಜೆಟ್‌ ಜೊತೆಗೆ ಅವರ ಸೀರೆ ಕೂಡ ಸುದ್ದಿಯಾಗುತ್ತಿತ್ತು. ನಿರ್ಮಲಾ ಸೀತಾರಾಮನ್‌ ಅವರ ಭಾರತೀಯ ಜವಳಿಗಳ ಮೇಲಿನ ಪ್ರೀತಿ ಅಪಾರ. ಅವರು ಯಾವಾಗಲೂ ಸ್ಥಳೀಯ ಕೈಮಗ್ಗಗಳನ್ನು ಬಳಸುವ ಕರೆ ನೀಡುತ್ತಾರೆ.

Advertisement. Scroll to continue reading.

ಕಳೆದ ವರ್ಷದ ಬಜೆಟ್‌ನಲ್ಲಿ ಅವರು ಕೆಂಪು ಬಣ್ಣದ ಇಳಕಲ್ ಸೀರೆ ತೊಟ್ಟು ಮಿಂಚಿದ್ದರು.

ಈ ಬಾರಿಯ ಬಜೆಟ್‌ನಲ್ಲಿ ನಿರ್ಮಲಾ ಅವರು ಧರಿಸಿದ್ದ ಸೀರೆ ಸಂಪೂರ್ಣ ನೀಲಿ ಬಣ್ಣದ್ದಾಗಿತ್ತು. ಮಧ್ಯದಲ್ಲಿ ಕೆನೆ ಬಣ್ಣದ ಚಿತ್ತಾರವಿತ್ತು. ಬಳ್ಳಿ ಹಾಗೂ ಎಲೆಗಳಿಂದ ಕೂಡಿರುವ ಚಿತ್ತಾರವನ್ನು ಸೀರೆಯಲ್ಲಿ ಕಾಣಬಹುದಾಗಿದೆ. ಸೀರೆಗೊಪ್ಪುವ ಕೆನೆ ಬಣ್ಣದ ಮ್ಯಾಚಿಂಗ್‌ ಬ್ಲೌಸ್‌ ಧರಿಸಿದ್ದಾರೆ.

ಈ ಸೀರೆ ತುಸ್ಸಾರ್ ರೇಷ್ಮೆಯದ್ದು. ಪಶ್ಚಿಮ ಬಂಗಾಳ, ಬಿಹಾರ, ಝಾರ್ಖಂಡ್, ಒಡಿಶಾ ಪ್ರದೇಶಗಳಲ್ಲಿ ಸಿಗುವ ರೇಷ್ಮೆಯಿಂದ ಈ ಸೀರೆ ನೇಯಲಾಗುತ್ತದೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com