ಬೆಂಗಳೂರು: ರಾಜ್ಯ ಬಜೆಟ್ 2024-25ಕ್ಕೆ ಕ್ಷಣಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 15ನೇ ಬಾರಿ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಬೆಳಗ್ಗೆ 10:15 ರಿಂದ ಸಿದ್ದರಾಮಯ್ಯ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಗಾತ್ರ 3.75 ಲಕ್ಷ ಜೋಟಿ ರೂ.ನಿಂದ 3.80 ಲಕ್ಷ ಕೋಟಿ ರೂ.ಗಳ ವರೆಗೆ ಇರಲಿದೆ ಎಂದು ಹೇಳಲಾಗಿದೆ.
ಐದು ಗ್ಯಾರಂಟಿಗಳಿಗೆ ಸುಮಾರು 54 ಸಾವಿರ ಕೋಟಿ ರೂಪಾಯಿ ಮೀಸಲು ಇಡಲಿರುವ ಸಿಎಂ ರೈತರಿಗೆ ಬಡ್ಡಿ ರಹಿತ ಸಾಲ ಹಣ ಏರಿಕೆ, ಮಹಿಳಾ ಸ್ವಸಹಾಯ ಸಂಘಗಳಿಗೆ ಹಣಕಾಸು ಮೀಸಲು, ಶೂನ್ಯ ಬಡ್ಡಿದರದಲ್ಲಿ ಸಾಲ, ವೃದ್ಧಾಪ್ಯ ವೇತನ ಏರಿಕೆ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ವಿಶೇಷ ಅನುದಾನ ಮೊದಲಾದ ವಿಚಾರಗಳ ಬಗ್ಗೆ ನಿರೀಕ್ಷೆ ಇಡಲಾಗಿದೆ.
Advertisement. Scroll to continue reading.