ಅಂತಾರಾಷ್ಟ್ರೀಯ

ಈ ಚರ್ಚ್‌ನ ಮೇಲ್ಛಾವಣಿಯಲ್ಲಿ ನೇತಾಡುತ್ತಿದೆ ಮೃತದೇಹ..!

0

ಜಗತ್ತೇ ಒಂದು ವಿಸ್ಮಯಗಳ ಆಗರ. ಇಲ್ಲಿ ಹಲವು ವಿಚಿತ್ರಗಳು ಸಂಭವಿಸಿದೆ, ಸಂಭವಿಸುತ್ತಲೇ ಇರುತ್ತವೆ. ಇನ್ನು ಕೆಲವು ವಿಚಿತ್ರ ನಂಬಿಕೆಗಳೂ ಚಾಲ್ತಿಯಲ್ಲಿವೆ. ಇವುಗಳು ಒಂದಲ್ಲ ಒಂದು ಬಾರಿ ಸುದ್ದಿಯಾಗುತ್ತದೆ. ಇದೀಗ ಇಟೆಲಿಯ ಚರ್ಚ್ ತನ್ನ ವಿಚಿತ್ರವಾದ ನಂಬಿಕೆಯಿಂದ ಭಾರಿ ಸುದ್ದಿಯಲ್ಲಿದೆ.

ಈ ಚರ್ಚ್‌ನ ಒಳಗೆ ಪ್ರವೇಶಿಸುತ್ತಿದ್ದಂತೆ ಮೇಲ್ಛಾವಣಿಯಲ್ಲಿ 500 ವರ್ಷಗಳಿಂದ ನೇತಾಡುತ್ತಿರುವ ಮೊಸಳೆಯೊಂದರ ಮೃತದೇಹವನ್ನು ಕಾಣಬಹುದು. ಈ ಚರ್ಚ್ 13ನೇ ಶತಮಾನದಷ್ಟು ಹಿಂದಿನದ್ದಾಗಿದ್ದು, ಈ ಮೊಸಳೆಯ ಮೃತದೇಹವನ್ನು ಧಾರ್ಮಿಕ ಸಂಕೇತವೆಂದು ನಂಬಲಾಗಿದೆ.

ಇಟಲಿಯ ಲೊಂಬಾರ್ಡಿ ಪ್ರದೇಶದಲ್ಲಿರುವ ಈ ಚರ್ಚ್‌ನ ಹೆಸರು ಸ್ಯಾಂಟ್ಯುರೋ ಡೆಲ್ಲಾ ಬೀಟಾ ವರ್ಜಿನ್ ಮರಿಯಾ ಡೆಲ್ಲೆ ಗ್ರಾಝಿ (Santurio della Beata Virgin Maria delle Grazie). ಈ ಚರ್ಚ್‌ನಲ್ಲಿ ನಿಜವಾದ ಮೊಸಳೆಯ ಮೃತದೇಹವನ್ನು ನೇತು ಹಾಕಲಾಗಿದೆ. ಆದರೆ ಈ ಚರ್ಚ್‌ಗೆ ಮೊಸಳೆಯ ಮೃತ ದೇಹವು ಹೇಗೆ ಬಂತು ಎಂಬುದರ ಕುರಿತು ಅನೇಕ ಜನರಿಗೆ ಕುತೂಹಲ ಇರಬಹುದು. ಆದರೆ ಅದು ಹೇಗೆ ಬಂತು ಎಂಬ ವಿವರ ತಿಳಿದುಬಂದಿಲ್ಲ. ಇದು ಧಾರ್ಮಿಕ ಸಂಕೇತವೆಂದು ನಂಬಲಾಗಿದೆ. ಸಾಮಾನ್ಯವಾಗಿ ನೋಡಿದಾಗ ಅದು ನಕಲಿ ಮೊಸಳೆಯಂತೆ ಅನಿಸಬಹುದು. ಆದರೆ ಇದು ನಿಜವಾದ ಮೊಸಳೆ. ಇದನ್ನು ಸುಮಾರು 500 ವರ್ಷಗಳ ಹಿಂದೆ ಕೊಂದು ನೇತು ಹಾಕಲಾಗಿದೆ ಎಂದು ಹೇಳಲಾಗುತ್ತದೆ.

Advertisement. Scroll to continue reading.

ಅಲ್ಲಿನ ಸ್ಥಳೀಯರು ಹೇಳುವಂತೆ ಫ್ರಾನ್ಸಿಸ್ಕೊ ಗೊನ್ಜಾಗಾದಲ್ಲಿನ ಖಾಸಗಿ ಮೃಗಾಲಯದಿಂದ ತಪ್ಪಿಸಿಕೊಂಡ ಮೊಸಳೆಯನ್ನು ಇಲ್ಲಿ ಇಬ್ಬರು ಸಹೋದರರು ಸೆರೆಹಿಡಿದು ಕೊಂದಿದ್ದಾರೆ ಎನ್ನಲಾಗುತ್ತದೆ. ಮಿನ್ಸಿಯೊ ನದಿಯ ದಡದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಇಬ್ಬರು ಸಹೋದರರ ಮೇಲೆ ಮೊಸಳೆ ದಾಳಿ ಮಾಡಿದಾಗ ಅವರು ದೇವರ ದಯೆಯಿಂದ ಮೊಸಳೆಯನ್ನು ಕೊಂದರು ಎಂದು ಹೇಳಲಾಗುತ್ತದೆ. ಇಂತಹ ಅನೇಕ ಕಥೆಗಳು ಈ ಚರ್ಚ್‌ನ ಸುತ್ತಲೂ ಹರಡಿಕೊಂಡಿವೆ. ಯಾವುದು ನಿಜವೋ ಗೊತ್ತಿಲ್ಲ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com