ನವದೆಹಲಿ: ಮುಂದಿನ ತಿಂಗಳು ಚುನಾವಣಾ ಆಯೋಗದಿಂದ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದ್ದು, ಅದಕ್ಕೆ ಮುಂಚಿತವಾಗಿ ಬಿಜೆಪಿ ಮುಂದಿನವಾರವೇ 100 ಅಭ್ಯರ್ಥಿಗಳ ಹೆಸರಿನ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
ಈ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಬ್ಬರ ಹೆಸರೂ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಫೆಬ್ರವರಿ 29 ರಂದು ಸಭೆ ಸೇರಲಿದ್ದು, ಅದರ ನಂತರ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
543 ಸಂಸತ್ ಸ್ಥಾನಗಳಲ್ಲಿ 370 ಸೀಟುಗಳನ್ನು ಗೆಲ್ಲುವ ಹಾಗೂ ಎನ್‌ಡಿಎ ಮೈತ್ರಿಕೂಟದ ಒಟ್ಟು ಸೀಟುಗಳನ್ನು 400ರ ಗಡಿ ದಾಟಿಸುವ ಬೃಹತ್ ಗುರಿಯನ್ನು ಹೊಂದಿರುವುದರಿಂದ ಆಡಳಿತಾರೂಢ ಬಿಜೆಪಿಗೆ ಮೊದಲ ಪಟ್ಟಿ ನಿರ್ಣಾಯಕವಾಗಿದೆ.543 ಸಂಸತ್ ಸ್ಥಾನಗಳಲ್ಲಿ 370 ಸೀಟುಗಳನ್ನು ಗೆಲ್ಲುವ ಹಾಗೂ ಎನ್‌ಡಿಎ ಮೈತ್ರಿಕೂಟದ ಒಟ್ಟು ಸೀಟುಗಳನ್ನು 400ರ ಗಡಿ ದಾಟಿಸುವ ಬೃಹತ್ ಗುರಿಯನ್ನು ಹೊಂದಿರುವುದರಿಂದ ಆಡಳಿತಾರೂಢ ಬಿಜೆಪಿಗೆ ಮೊದಲ ಪಟ್ಟಿ ನಿರ್ಣಾಯಕವಾಗಿದೆ.
Advertisement. Scroll to continue reading.
ಪ್ರಧಾನಿ ಮೋದಿ ಅವರು ವಾರಣಾಸಿಯಿಂದ ಸಂಸದರಾಗಿದ್ದಾರೆ. ಅವರು ಎರಡು ಬಾರಿ ಗೆದ್ದಿದ್ದಾರೆ. ಮೋದಿ 2014 ರಲ್ಲಿ 3.37 ಲಕ್ಷ ಮತಗಳ ಭಾರೀ ಅಂತರದಿಂದ ಚುನಾಯಿತರಾಗಿದ್ದರು. 2019 ರಲ್ಲಿ ಅದನ್ನು 4.8 ಲಕ್ಷಕ್ಕೆ ಹೆಚ್ಚಿಸಿದರು. ಅಮಿತ್ ಶಾ ಅವರು 2019 ರ ಚುನಾವಣೆಯಲ್ಲಿ ಗಾಂಧಿನಗರದಿಂದ ಸ್ಪರ್ಧಿಸಿದ್ದರು.