ರಾಷ್ಟ್ರೀಯ

ಸಾಲ ತೀರಿಸಲು ಜೀವ ವಿಮಾ ಹಣಕ್ಕಾಗಿ ತಾಯಿಯನ್ನೇ ಕೊಂದ ಮಗ

0

ಫತೇಹ್ ಪುರ: ಆನ್ ಲೈನ್ ಗೇಮ್ಸ್ ಗೀಳು ಅಂಟಿಸಿಕೊಂಡಿದ್ದ ಯುವಕನೋರ್ವ, ಇನ್ಶೂರೆನ್ಸ್ ಹಣಕ್ಕಾಗಿ ತನ್ನ ತಾಯಿಯನ್ನೇ ಹತ್ಯೆ ಮಾಡಿದ ಭಯಾನಕ ಘಟನೆ ಉತ್ತರ ಪ್ರದೇಶದ ಫತೇಹ್ ಪುರದಲ್ಲಿ ನಡೆದಿದೆ.

ಹಿಮಾಂಶು ಎಂಬಾತ 50 ಲಕ್ಷ ರೂ ಹಣಕ್ಕಾಗಿ ತಾಯಿಯನ್ನು ಕೊಂದು ಆಕೆಯ ಶವವನ್ನು ಯಮುನಾ ನದಿ ತೀರದಲ್ಲಿ ಹೂತಿದ್ದಾನೆ.

ಆರೋಪಿಯು ಆನ್ ಲೈನ್ ಗೇಮಿಂಗ್‌ ಚಟ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆ ವ್ಯಸನದಿಂದ ಅವನು ಹಲವು ಬಾರಿ ನಷ್ಟ ಅನುಭವಿಸಿದ್ದ. ಇದರಿಂದ ಅವನು ಸುಮಾರು 4 ಲಕ್ಷ ಸಾಲ ಮಾಡಿದ್ದ. ಸಾಲಗಾರರಿಗೆ ಮರು ಪಾವತಿ ಮಾಡಲೆಂದು ಈತ ನಿರ್ದಯ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement. Scroll to continue reading.

ಹಿಮಾಂಶು, ತನ್ನ ತಂದೆಯ ಚಿಕ್ಕಮ್ಮನ ಚಿನ್ನಾಭರಣಗಳನ್ನು ಕಳವು ಮಾಡಿ, ಅದೇ ಹಣದಲ್ಲಿ ತನ್ನ ಹೆತ್ತವರಿಗೆ ತಲಾ 50 ಲಕ್ಷ ಮೌಲ್ಯದ ಜೀವ ವಿಮಾ ಪಾಲಿಸಿಗಳನ್ನು ಖರೀದಿಸಿದ್ದ.

ಜೀವ ವಿಮೆ ಮಾಡಿಸಿದ ಕೆಲವೇ ದಿನಗಳಲ್ಲಿ ಆತ ತಂದೆ ಇಲ್ಲದಿದ್ದಾಗ ತಾಯಿ ಪ್ರಭಾ ಅವರನ್ನು ಉಸಿರುಗಟ್ಟಿಸಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಚೀಲದಲ್ಲಿ ಹಾಕಿ ಅದನ್ನು ವಿಲೇವಾರಿ ಮಾಡಲು ಟ್ರ್ಯಾಕ್ಟರ್ ಮೂಲಕ ಯಮುನಾ ನದಿಯ ದಡಕ್ಕೆ ಕೊಂಡೊಯ್ದಿದ್ದ.

ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆಯ ವೇಳೆ ತನ್ನ ಸಾಲ ತೀರಿಸಲು ಆತ ಈ ಕೃತ್ಯ ನಡೆಸಿದ್ದ ಎಂದು ಬಾಯ್ಬಿಟ್ಟಿದ್ದಾನೆ

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com