ಅಂತಾರಾಷ್ಟ್ರೀಯ

ಹಾಟ್ ಆಗಿ ಕಾಣಲು ತನ್ನ ರಕ್ತವನ್ನು ತಾನೇ ಕುಡಿಯುತ್ತಾಳೆ ಈ ಯುವತಿ…!

0

ಹೆಣ್ಣು ಮಕ್ಕಳು ತಮ್ಮ ಸೌಂದರ್ಯದ ಬಗ್ಗೆ ಅತಿ ಕಾಳಜಿ ವಹಿಸುತ್ತಾರೆ. ತಾವು ಚಂದ ಕಾಣ ಬೇಕು ಎಂದು ಹಲವು ರೀತಿಯ ಅಭ್ಯಾಸಗಳನ್ನು ಮೈಗೂಡಿಸುಕೊಂಡಿರುತ್ತಾರೆ. ಈಗ ರೂಪದರ್ಶಿಯೋರ್ವಳು ತನ್ನ ಸೌಂದರ್ಯಕ್ಕಾಗಿ ತನ್ನ ರಕ್ತವನ್ನೇ ಕುಡಿಯುತ್ತಿದ್ದೇನೆ ಎನ್ನುವ ಮೂಲಕ ಸಖತ್ ಸುದ್ದಿಯಾಗಿದ್ದಾಳೆ.

ನನ್ನ ಯೌವನವನ್ನು ನಾನು ಶಾಶ್ವತವಾಗಿ ಉಳಿಸಿಕೊಳ್ಳಲು ಬಯಸುತ್ತೇನೆ. ಆದ್ದರಿಂದ ತನ್ನ ರಕ್ತವನ್ನು ತಾನೇ ಕುಡಿಯುತ್ತಿದ್ದಾನೆ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಫೇಮಸ್ ಆಗಿರುವ ಮಾಡೆಲ್ ಸೋಫಿಯಾ ಕ್ಲೆರಿಕಿ ಹೇಳಿಕೊಂಡಿದ್ದಾರೆ. ಈಕೆಯ ವಿಚಿತ್ರ ಅಭ್ಯಾಸವನ್ನು ಕಂಡು ನೆಟ್ಟಿಗರು ಹಾಗೂ ಆಕೆಯ ಅಭಿಮಾನಿಗಳು ಫುಲ್ ಶಾಕ್ ಆಗಿ ಹೋಗಿದ್ದಾರೆ. ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಮಾಡೆಲ್ ಸೋಫಿಯಾ ಕ್ಲೆರಿಕಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೋಬ್ಬರಿ 20 ಲಕ್ಷಕ್ಕಿಂತಲೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಪ್ರತೀ ಬಾರಿ ಆಕೆ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡಿದಾಗ ಆಕೆಯ ಅಭಿಮಾನಿಗಳು ಬ್ಯೂಟಿ ಸೀಕ್ರೇಟ್ ಏನು ಎಂದು ಕಾಮೆಂಟ್ ಮಾಡುತ್ತಿದ್ದರು. ತನ್ನ ಅಭಿಮಾನಿಗಳ ಪ್ರಶ್ನೆಗೆ ಇತ್ತೀಚೆಗಷ್ಟೇ ಉತ್ತರ ನೀಡಿದ್ದು, ಆಕೆಯ ಉತ್ತರ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. ವಯಸ್ಸಾದರೂ ಹಾಟ್ ಆಗಿ ಕಾಣಲು ನಾನು ನನ್ನ ರಕ್ತವನ್ನೇ ಕುಡಿಯುತ್ತೇನೆ ಎಂದು ಸೋಫಿಯಾ ಹೇಳಿಕೊಂಡಿದ್ದಾಳೆ.

Advertisement. Scroll to continue reading.

ನಾನು ನನ್ನ ರಕ್ತವನ್ನು ಜ್ಯೂಸ್ನೊಂದಿಗೆ ಬೆರೆಸಿ ಕುಡಿಯುತ್ತೇನೆ. ಅದಕ್ಕಾಗಿ ನಾನು ನನ್ನ ಕೆಲಸದ ನಿಮ್ಮಿತ್ತ ಎಲ್ಲಿಗಾದರೂ ಹೋಗಬೇಕಾದರೂ ಕೂಡ ನನ್ನ ಬ್ಯಾಗಿನಲ್ಲಿ ಟ್ಯೂಬ್ನಲ್ಲಿ ರಕ್ತ ಇರಿಸಿಕೊಂಡು ಹೋಗುತ್ತೇನೆ ಎಂದು ಹೇಳಿಕೊಂಡಿದ್ದಾಳೆ.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com