ಬಿಡುವಿಲ್ಲದ ದುಡಿಮೆ ಮತ್ತು ನಿತ್ಯಬದುಕಿನ ಜಂಜಾಟದಿಂದ ಹೊರ ಬಂದು ವೀಕೆಂಡ್ ಮಸ್ತಿಗೆ ಕಾಯುತ್ತಿರುವ ಮಂಗಳೂರಿನ ಜನತೆಗೆ ಸಂತಸದ ಸುದ್ದಿಯೊಂದಿದೆ. ಕೆಲಸ ಒತ್ತಡವನ್ನು ನಕ್ಕು ಹಗುರವಾಗಿಸಲು ಮುಂದಿನ ತಿಂಗಳು ಮಾರ್ಚ್ 3ರಂದು ಅತ್ತಾವರದ ಅವತಾರ್ ಹೋಟೆಲ್‌ನಲ್ಲಿ ‘ಲಾಫ್ಟರ್ ಹೌಸ್’ ಕಾಮಿಡಿ ಶೋ ಹಾಗೂ ಡಿಜೆ ನೈಟ್ಸ್ ಆಯೋಜಿಸಲಾಗಿದೆ.
ಕಾಮಿಡಿ ಸ್ಟಾರ್‌ಗಳಾದ ಅತುಲ್ ಖತ್ರಿ ಹಾಗೂ ಜೀವೇಶು ಅಹ್ಲುವಾಲಿಯಾ ಜುಗಲ್‌ಬಂದಿಯಲ್ಲಿ ಈ ಶೋ ನಡೆಯಲಿದ್ದು, ದೈನಂದಿನ ಕೆಲಸದ ಜಂಜಾಟದಿಂದ ಕುಗ್ಗಿ ಹೋಗಿರುವ ನಿಮ್ಮ ಮನಸ್ಸಿಗೆ ಹೊಸ ಉಲ್ಲಾಸ ನೀಡಲಿದ್ದಾರೆ.
ಮಾರ್ಚ್ 3ರಂದು ಸಂಜೆ 6.30ಕ್ಕೆ ಸರಿಯಾಗಿ ಅತ್ತಾವರದಲ್ಲಿರುವ ಅವತಾರ್ ಹೋಟೆಲ್ ಹಾಗೂ ಕನ್ವೆನ್ಶನ್‌ನಲ್ಲಿ ನಿಮ್ಮನ್ನು ನಕ್ಕು ನಗಿಸಲು ಡೈನಾಮಿಕ್ ಜೋಡಿ ಸಿದ್ಧರಾಗಿದ್ದಾರೆ. ಇವರು ನಿಮ್ಮನ್ನು ನಗೆ ಕಡಲಿನಲ್ಲಿ ತೇಲಿಸುವುದು ಪಕ್ಕಾ. ಮತ್ಯಾಕೆ ತಡ, ಇಂದೇ ನಿಮ್ಮ ಟಿಕೆಟ್ ಖಾತರಿಪಡಿಸಿ, ಮನತುಂಬಿ ನಗಲು ಸಿದ್ಧರಾಗಿ…
ಡೈನಾಮಿಕ್ ಜೋಡಿ: ಅತುಲ್ ಖತ್ರಿ ಹಾಗೂ ಜೀವೆಶು ಅಹ್ಲುವಾಲಿಯಾ ಭಾರತದ ಸ್ಟಾರ್ ಕಾಮಿಡಿಯನ್‌ಗಳಾಗಿದ್ದು, ತಮ್ಮದೇ ಶೈಲಿಯಲ್ಲಿ ಜನರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಕಾರ್ಯಕ್ರಮ ಜನರನ್ನು ನಗೆಗಡಲಿನಲ್ಲಿ ತೇಲಿಸುವುದು ಗ್ಯಾರಂಟಿ.
ದಿನ ನೆನಪಿರಲಿ: ಇದೇ ಮಾರ್ಚ್ 3ರಂದು ಸಂಜೆ 6.30ರಂದು ‘ಹೌಸ್ ಆಫ್ ಲಾಫ್ಟರ್’ ಸ್ಟ್ಯಾಂಡ್ ಅಪ್ ಕಾಮಿಡಿ ಶೋ ನಡೆಯಲಿದೆ. ನಿಮ್ಮ ಮನಸ್ಸನ್ನು ಉಲ್ಲಸಿತಗೊಳಿಸಲು ನಿಮ್ಮ ಕ್ಯಾಲೆಂಡರಲ್ಲಿ ಈ ದಿನವನ್ನು ಮಾರ್ಕ್ ಮಾಡಿಟ್ಟುಕೊಳ್ಳಿ.
ಅತಿಥಿ ಸತ್ಕಾರ: ಅವತಾರ್ ಹೋಟೆಲ್ ಅತ್ಯುತ್ತಮ ಅತಿಥಿ ಸತ್ಕಾರ ನೀಡುವುದರಲ್ಲಿ ಹೆಸರುವಾಸಿ. ಈ ಕಾರ್ಯಕ್ರಮ ಆಯೋಜಿಸಲು ಇದು ಕೂಡ ಕಾರಣ. ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ರೀತಿಯ ಸಿದ್ಧತೆಗಳು ನಡೆದಿವೆ. ಕುಡ್ಲದ ಆತಿಥ್ಯದ ಸೊಬಗು ಇಲ್ಲಿ ಅನುಭವಕ್ಕೆ ಬರಲಿದೆ.
ಅತುಲ್ ಖತ್ರಿ ಬಗ್ಗೆ: ಕಾಮಿಡಿಯನ್ ಅತುಲ್ ಖತ್ರಿ ಈಸ್ಟ್ ಇಂಡಿಯಾ ಕಾಮಿಡಿ ಗ್ರೂಪ್‌ನ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಈ ಕ್ಷೇತ್ರದಲ್ಲಿ ಅವರಿಗೆ ಸಾಕಷ್ಟು ಅನುಭವವಿದ್ದು, ಜನರನ್ನು ನಗಿಸುವುದು ಹಾಗೂ ತನ್ನ ಕಾರ್ಯಕ್ರಮದಲ್ಲಿ ಹಿಡಿದಿಟ್ಟುಕೊಳ್ಳುವುದರಲ್ಲಿ ನಿಸ್ಸೀಮರು. ಅವರು ದೈನಂದಿನ ಜೀವನ ಹಾಗೂ ಸುತ್ತಮುತ್ತಲ ಘಟನೆಗಳನ್ನೇ ಕಾಮಿಡಿ ವಿಷಯವನ್ನಾಗಿಸಿ ನಗಿಸುತ್ತಾ, ಆಡಿಯನ್ಸ್‌ಗೆ ಬೇಗನೆ ಕನೆಕ್ಟ್ ಆಗುತ್ತಾರೆ.
ಜೀವೇಶು ಅಹ್ಲುವಾಲಿಯಾ: ಜೀವೇಶು ತನ್ನ ಹಾಸ್ಯ ಪ್ರಜ್ಞೆಗಾಗಿಯೇ ಜನಪ್ರಿಯರು. ಅವರು ಈ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ. ಅವರ ಹಾಸ್ಯದಲ್ಲಿನ ಮೋಜಿನ ಸಂಗತಿಗಳು ಜನರಲ್ಲಿ ನಗು ತರಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.
ನಗೆ ಲೋಕಕ್ಕೆ ಟಿಕೆಟ್: ಈ ನಗೆ ಹಬ್ಬದಲ್ಲಿ ನೀವು ಭಾಗಿದಾರಿಯಾಗಲು ಇಚ್ಛಿಸಿದ್ದರೆ, ಟಿಕೆಟ್ ಪಡೆಯಬೇಕಾಗುತ್ತದೆ. ನೀವು ಅತುಲ್, ಜೀವೇಶು ಅವರ ಅಭಿಮಾನಿಯಾಗಿದ್ದರೆ ಅಥವಾ ನಗಲು ಸಿದ್ಧರಾಗಿದ್ದಾರೆ ಈ ಕಾರ್ಯಕ್ರಮ ನಿಮಗೆ ಹೇಳಿ ಮಾಡಿಸಿದಂತಿದೆ. ಈಗಾಗಲೇ ಟಿಕೆಟ್ ಬುಕ್ಕಿಂಗ್ ತೆರೆದಿದೆ.
ಮೀಟ್ ಆ್ಯಂಡ್ ಗ್ರೀಟ್: ನೀವು ಕಾರ್ಯಕ್ರಮದಲ್ಲಿ ನಗುವುದು ಮಾತ್ರವಲ್ಲ, ಕಾಮಿಡಿ ಸ್ಟಾರ್‌ಗಳ ಅಭಿಮಾನಿಯಾಗಿದ್ದರೆ ಅವರನ್ನು ಭೇಟಿಯಾಗುವ ಹಾಗೂ ಮಾತನಾಡುವ ಅವಕಾಶವನ್ನೂ ಕಲ್ಪಿಸಲಾಗುತ್ತದೆ.
ನಗು ಹಂಚಿ: ನಗುವುದು ಮಾನವನ ಸಹಜ ಧರ್ಮ, ಇನ್ನು ನಾವು ನಕ್ಕರೆ ಸಾಕೇ.. ನಗುವನ್ನು ಹಂಚಿಕೊಳ್ಳಬೇಕು, ಅದಕ್ಕಾಗಿ ಈ ಕಾರ್ಯಕ್ರಮಕ್ಕೆ ನಿಮ್ಮ ಮನೆಯವರು ಹಾಗೂ ಗೆಳೆಯರನ್ನು ಕರೆದುಕೊಂಡು ಬನ್ನಿ, ಅವರ ಮುಖದಲ್ಲೂ ನಗು ಮೂಡಿಸಿ.
ಹೊಟ್ಟೆ ತುಂಬಾ ಊಟ: ಮನಸ್ಸಿಗೆ ಬೇಕಾದಷ್ಟು ನಕ್ಕರೆ ಮನಸು ಹಗುರಾಗುತ್ತದೆ. ಇನ್ನು ಹೊಟ್ಟೆ ಹಗುರವಾದರೆ ಭಕ್ಷ್ಯ ಭೋಜನ ಬೇಕಾಗುತ್ತದೆ. ಕಾರ್ಯಕ್ರಮದಲ್ಲಿ ಮಂಗಳೂರಿನ ವಿಶೇಷ ತಿಂಡಿ ತಿನಿಸುಗಳಿವೆ. ಬಾಯಲ್ಲಿ ನೀರೂರಿಸುವ ವಿವಿಧ ಭಕ್ಷ್ಯ ಭೋಜನಗಳು ಅನಿಯಮಿತ!
ಡಿಜೆ ನೈಟ್ಸ್: ನಗೆ ಕಡಲಿನಲ್ಲಿ ತೇಲಿ ಮನಸ್ಸು ಹಗುರವಾದ ಮೇಲೆ, ಕುಡ್ಲದ ಸ್ಪೆಷಲ್ ಊಟ ಸವಿದ ನಂತರ ಸ್ವಲ್ಪ ಬೀಟ್‌ಗೆ ಕುಣಿದರೆ ಹೇಗಿರಬಹುದು? ಹೌದು, ರಾತ್ರಿ ಸಮಯದಲ್ಲಿ ಡಿಜೆ ಸೌಂಡ್ಸ್‌ಗೆ ಕುಣಿಯುವ ಅವಕಾಶವನ್ನೂ ಈ ಕಾರ್ಯಕ್ರಮದಲ್ಲಿ ನೀಡಲಾಗುತ್ತಿದೆ. ಈ ಕಾರ್ಯಕ್ರಮ ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಇರಲಿದೆ.
ಇನ್ನೇಕೆ ತಡ, ನಿಮ್ಮ ಟಿಕೆಟ್ ಬುಕ್ ಮಾಡಿ, ಇಡೀ ವಾರದ ಜಂಜಾಟದ ಬದುಕಿನಿಂದ ಬಿಡುಗಡೆ ಹೊಂದಿ ಮನಸು ಬಿಚ್ಚಿ ನಕ್ಕು ಬಿಡಿ. ನಿಮ್ಮ ವೀಕೆಂಡ್ “ಹೌಸ್ ಆಫ್ ಲಾಫ್ಟರ್”ನಿಂದ ಅದ್ಭುತವಾಗಿರಲಿ.