ನವದೆಹಲಿ: ಐಪಿಎಲ್ಗೆ ಕೌಂಟ್ ಡೌನ್ ಶುರುವಾಗಿದ್ದು, ಎಲ್ಲ ತಂಡಗಳು ಸಿದ್ಧತೆಯಲ್ಲಿ ತೊಡಗಿವೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಹೊರತುಪಡಿಸಿ ಉಳಿದ ಐಪಿಎಲ್ ತಂಡದ ಬಹುತೇಕ ಆಟಗಾರರು ತಂಡದ ಕ್ಯಾಂಪ್ ಸೇರಿಕೊಂಡು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಬ್ಯಾಟ್ಸಮನ್ ಮೊದಲ ಹಂತದ ಪಂದ್ಯಕ್ಕೆ ಲಭ್ಯರಾಗುವುದು ಅನುಮಾನವೆನಿಸಿದೆ.
ಚೆನ್ನೈ ಹಾಗೂ ಆರ್ ಸಿಬಿ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ.
ಕಿವೀಸ್ ತಂಡದ ಸ್ಟಾರ್ ಆಟಗಾರ, ಸಿಎಸ್ ಕೆ ಆರಂಭಿಕ ಬ್ಯಾಟರ್ ಡೇವನ್ ಕಾನ್ವೆ ಈ ಬಾರಿಯ ಐಪಿಎಲ್ ಟೂರ್ನಿಯ ಮೊದಲ ಹಂತದ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ T20I ಸರಣಿಯ ವೇಳೆ ಕಾನ್ವೆ ಅವರ ಹೆಬ್ಬೆರಳಿಗೆ ಗಾಯವಾಗಿತ್ತು. ಈ ಕಾರಣದಿಂದ ಅವರು ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ ಆಸೀಸ್ ವಿರುದ್ದದ ಎರಡನೇ ಟೆಸ್ಟ್ ಪಂದ್ಯಕ್ಕೂ ಮೊದಲು ಕಾನ್ವೆ ಅವರ ಗಾಯದ ಬಗ್ಗೆ ನ್ಯೂಜಿಲೆಂಡ್ ಕ್ರಿಕೆಟ್ ಅಪ್ಡೇಡ್ ನೀಡಿದೆ.
Advertisement. Scroll to continue reading.
ಕಾನ್ವೆ ಅವರು ಆಸೀಸ್ ವಿರುದ್ಧ ಟಿ-20 ಪಂದ್ಯದಲ್ಲಿಗಾಯಗೊಂಡ ಕಾರಣ, ಅವರು ಹೆಬ್ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಹಲವಾರು ಸ್ಕ್ಯಾನ್ಗಳು ಮತ್ತು ತಜ್ಞರ ಸಲಹೆಯನ್ನು ಅನುಸರಿಸಿ, ಕನಿಷ್ಠ ಎಂಟು ವಾರಗಳ ಕಾಲ ಅವರ ಚೇತರಿಕೆಗೆ ಸಮಯ ಬೇಕಾಗುತ್ತದೆ ನ್ಯೂಜಿಲೆಂಡ್ ಕ್ರಿಕೆಟ್ ಹೇಳಿದೆ.
ಕಾನ್ವೆ ಅವರ ಅಲಭ್ಯತೆ ಬಗ್ಗೆ ಇನ್ನಷ್ಟೇ ಸಿಎಸ್ ಕೆ ಅಧಿಕೃತ ಮಾಹಿತಿ ನೀಡಬೇಕಿದೆ. ಶಸ್ತ್ರ ಚಿಕಿತ್ಸೆಯ ಬಳಿಕ ಕಾನ್ವೆ ಚೇತರಿಕೆಗೆ ವಿಶ್ರಾಂತಿ ಪಡೆಯಬೇಕಾಗಿರುವುದರಿಂದ ಅವರು ಮೊದಲ ಹಂತದ ಐಪಿಎಲ್ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ.
Advertisement. Scroll to continue reading.