ಸ್ಯಾನ್ ಫ್ರಾನ್ಸಿಸ್ಕೋ: ಜಪಾನ್‌ಗೆ ಹೊರಟಿದ್ದ ವಿಮಾನವೊಂದು ಸ್ಯಾನ್ ಫ್ರಾನ್ಸಿಸ್ಕೋದಿಂದ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದ ಟೈರ್ ಕಳಚಿಬಿದ್ದಿದೆ. ಪರಿಣಾಮ 2 ಕಾರುಗಳು ಜಖಂಗೊಂಡಿವೆ.
ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಟೈರ್ ಕಳಚಿ ಬೀಳುತ್ತಿರುವ ವೀಡಿಯೋ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಟೇಕ್‌ಆಫ್ ಆದ ಕೆಲವೇ ಸೆಕೆಂಡುಗಳಲ್ಲಿ ವಿಮಾನವು ತನ್ನ 6 ಟೈಯರ್‌ಗಳಲ್ಲಿ ಒಂದು ಕಳಚಿಕೊಂಡಿದೆ. ಈ ಹಿನ್ನೆಲೆಯಲ್ಲಿ ವಿಮಾನವನ್ನು ಲಾಸ್ ಏಂಜಲೀಸ್‌ನಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ.
Advertisement. Scroll to continue reading.
ಈ ಸಂಬಂಧ ವಿಮಾನ ನಿಲ್ದಾಣದ ವಕ್ತಾರ ಡೌಗ್ ಯಾಕೆಲ್, ಸ್ಯಾನ್ ಫ್ರಾನ್ಸಿಸ್ಕೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿದ್ದ ಕಾರುಗಳ ಮೇಲೆ ಟೈರ್ ಬಿದ್ದಿದೆ. ಪರಿಣಾಮ ಕಾರುಗಳು ಜಖಂಗೊಂಡಿವೆ. ಆದರೆ ಯಾರಿಗೂ ಹಾನಿಯಾಗಿಲ್ಲ. ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ತಿಳಿಸಿದ್ದಾರೆ.