ಮುಂಬಯಿ: ವೈದ್ಯರೊಬ್ಬರು ನಗ್ನವಾಗಿ ಆಸ್ಪತ್ರೆಯಲ್ಲಿ ಓಡಾಡಿದ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ (ಹಿಂದಿನ ಔರಂಗಾಬಾದ್) ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯ ಬೆತ್ತಲೆಯಾಗಿ ಓಡಾಡುವುದು ವಿಡಿಯೋದಲ್ಲಿ ಸೆರೆಯಾಗಿದ್ದು, ಭಾರಿ ವಿವಾದ ಸೃಷ್ಟಿಸಿದೆ.
ಬಿಡ್ಕಿನ್ ಗ್ರಾಮೀಣ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ದುಶ್ಚಟದ ಅಭ್ಯಾಸ ಹೊಂದಿರುವ 45 ವರ್ಷದ ವೈದ್ಯ, ಎಣ್ಣೆ ಅಮಲಿನ ಪ್ರಭಾವದಿಂದ, ಬಟ್ಟೆಗಳಿಲ್ಲದೆ ಆಸ್ಪತ್ರೆಯಿಡೀ ಸುತ್ತಾಡಿದ್ದಾರೆ ಎಂದು ವರದಿಯಾಗಿದೆ.
ಕುಡಿದ ಅಮಲಿನಲ್ಲಿ ನಗ್ನನಾಗಿ ಆಸ್ಪತ್ರೆಯ ಒಳಗೆ ಅಡ್ಡಾಡಿದ ವೈದ್ಯನ ಹೆಸರು ಬಹಿರಂಗವಾಗಿಲ್ಲ. ಆದರೆ ಈ ವೈದ್ಯ ಮಾದಕ ವಸ್ತು ವ್ಯಸನಿಯಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Advertisement. Scroll to continue reading.
ಒಂದು ಚೂರೂ ಬಟ್ಟೆ ಇಲ್ಲದೆ ವೈದ್ಯ ಆಸ್ಪತ್ರೆಯ ಒಳಗೆ ಸುತ್ತಾಡಿದ್ದಾರೆ. ಕಾರಿಡಾರ್ನಲ್ಲಿ ಒಂದು ತುಂಡು ಬಟ್ಟೆಯನ್ನು ಬೀಸುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಕಾಣಿಸಿದೆ. ಅದರ ಬಳಿಕ ವಾಶ್ರೂಂ ಒಳಗೆ ಪ್ರವೇಶಿಸಿದ್ದಾರೆ. ಆಗ ಅದರ ಬಾಗಿಲು ತೆರೆದೇ ಇತ್ತು.
ಈ ಬಗ್ಗೆ ತನಿಖೆ ನಡೆಯುತ್ತಿದೆ. ವೈದ್ಯಕೀಯ ವರಿಷ್ಠಾಧಿಕಾರಿಗೆ ವರದಿ ನೀಡಲಾಗಿದೆ. ವೈದ್ಯ ತಪ್ಪಿತಸ್ಥ ಎಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಆರೋಗ್ಯ ಸೇವೆಗಳ ಮುಖ್ಯಸ್ಥರಾಗಿರುವ ಛತ್ರಪತಿ ಸಂಭಾಜಿನಗರ ಜಿಲ್ಲೆಯ ಸಿವಿಲ್ ಸರ್ಜನ್ ಡಾ ದಯಾನಂದ ಮೋಟಿಪಲ್ವೆ ತಿಳಿಸಿದ್ದಾರೆ.
Advertisement. Scroll to continue reading.