ಲಾಸ್ ಏಂಜಲೀಸ್: 96 ನೇ ಅಕಾಡೆಮಿ ಅವಾರ್ಡ್ಸ್ ನಲ್ಲಿ ಓಪನ್ ಹೈಮರ್ ಚಿತ್ರ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು ಗಳಿಸಿದೆ. ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಓಪನ್ ಹೈಮರ್ ಚಿತ್ರ ತಂಡ ವಿವಿಧ ವಿಭಾಗಗಳಲ್ಲಿ ಬರೊಬ್ಬರಿ 7 ಅಕಾಡೆಮಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಬಾಕ್ಸ್ ಆಫೀಸ್‌ನಲ್ಲಿ ಅಮೋಘ ಸಾಧನೆ ಮಾಡಿದ್ದ ಈ ಸಿನಿಮಾವು ಈಗ ಆಸ್ಕರ್ ವೇದಿಕೆಯಲ್ಲೂ ತನ್ನ ದಾಖಲೆಯನ್ನು ಮುಂದುವರಿಸಿದೆ.
ಓಪನ್‌ಹೈಮರ್’ ಸಿನಿಮಾದಲ್ಲಿ ಪ್ರಧಾನ ಪಾತ್ರ ಮಾಡಿದ್ದ ಸಿಲ್ಲಿಯನ್ ಮರ್ಫಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಜೂನಿಯರ್ ರಾಬರ್ಟ್ ಡೌನೆಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ, ಕ್ರಿಸ್ಟೋಫರ್ ನೋಲನ್‌ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ಅತ್ಯುತ್ತಮ ಸಿನಿಮಾ ಪ್ರಶಸ್ತಿ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಕಲನ ಪ್ರಶಸ್ತಿ, ಅತ್ಯುತ್ತಮ ಒರಿಜಿನಲ್ ಸ್ಕೋರ್ ಪ್ರಶಸ್ತಿಗಳು ‘ಓಪನ್‌ಹೈಮರ್’ ಸಿನಿಮಾಗೆ ಸಿಕ್ಕಿವೆ.
Advertisement. Scroll to continue reading.
ಅತ್ಯುತ್ತಮ ಸಿನಿಮಾ- ಓಪನ್‌ಹೈಮರ್
ಅತ್ಯುತ್ತಮ ನಟ- ಸಿಲ್ಲಿಯನ್ ಮರ್ಫಿ (ಓಪನ್‌ಹೈಮರ್)
ಅತ್ಯುತ್ತಮ ನಟಿ- ಎಮ್ಮಾ ಸ್ಟೋನ್ (ಪೂರ್ ಥಿಂಗ್ಸ್)
ಅತ್ಯುತ್ತಮ ನಿರ್ದೇಶಕ- ಕ್ರಿಸ್ಟೋಫರ್ ನೋಲನ್ (ಓಪನ್‌ಹೈಮರ್)
ಅತ್ಯುತ್ತಮ ಪೋಷಕ ನಟ- ಜೂನಿಯರ್ ರಾಬರ್ಟ್ ಡೌನೆ (ಓಪನ್‌ಹೈಮರ್)
ಅತ್ಯುತ್ತಮ ಪೋಷಕ ನಟಿ- Da’Vine Joy Randolph (ದಿ ಹೋಲ್ಡೋವರ್ಸ್)
ಅತ್ಯುತ್ತಮ ಅಡಪ್ಟೆಡ್ ಚಿತ್ರಕಥೆ- ಅಮೆರಿಕನ್ ಫಿಕ್ಷನ್
ಅತ್ಯುತ್ತಮ ಒರಿಜಿನಲ್ ಚಿತ್ರಕಥೆ- ಅನಟಮಿ ಆಪ್ ಎ ಫಾಲ್
ಅತ್ಯುತ್ತಮ ಅನಿಮೇಟೆಡ್ ಸಿನಿಮಾ- ದಿ ಬಾಯ್ & ದಿ ಹೆರೊನ್
ಅತ್ಯುತ್ತಮ ಅನಿಮೇಟೆಡ್ ಶಾರ್ಟ್- ವಾರ್ ಈಸ್ ಓವರ್!
ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್- ದಿ ಝೋನ್ ಆಫ್ ಇಂಟರೆಸ್ಟ್
ಅತ್ಯುತ್ತಮ ಸಾಕ್ಷ್ಯಚಿತ್ರ ಫೀಚರ್- 20 ಡೇಸ್ ಇನ್ ಮರಿಪೊಲ್
ಅತ್ಯುತ್ತಮ ಸಾಕ್ಷ್ಯಚಿತ್ರ ಶಾರ್ಟ್- ದಿ ಲಾಸ್ಟ್ ರಿಪೇರ್ ಶಾಪ್
ಅತ್ಯುತ್ತಮ ಒರಿಜಿನಲ್ ಸಂಗೀತ- ಓಪನ್‌ಹೈಮರ್
ಅತ್ಯುತ್ತಮ ಒರಿಜಿನಲ್ ಹಾಡು- ವಾಟ್ ವಾಸ್ ಈ ಮೇಡ್ ಫಾರ್? (ಬಾರ್ಬಿ)
ಅತ್ಯುತ್ತಮ ಸೌಂಡ್- ದಿ ಝೋನ್ ಆಫ್ ಇಂಟರೆಸ್ಟ್
ಅತ್ಯುತ್ತಮ ನಿರ್ಮಾಣ ವಿನ್ಯಾಸ- ಪೂರ್ ಥಿಂಗ್ಸ್
ಅತ್ಯುತ್ತಮ ಲೈವ್ ಆಕ್ಷನ್ ಶಾರ್ಟ್- ದಿ ವಂಡರ್‌ಫುಲ್ ಸ್ಟೋರಿ ಆಫ್ ಹೆನ್ರಿ ಶುಗರ್
ಅತ್ಯುತ್ತಮ ಛಾಯಾಗ್ರಹಣ- ಓಪನ್‌ಹೈಮರ್
ಅತ್ಯುತ್ತಮ ಪ್ರಸಾದನ & ಕೇಶವಿನ್ಯಾಸ- ಪೂರ್ ಥಿಂಗ್ಸ್
ಅತ್ಯುತ್ತಮ ವಸ್ತ್ರ ವಿನ್ಯಾಸ- ಪೂರ್ ಥಿಂಗ್ಸ್
ಅತ್ಯುತ್ತಮ ವಿಶುವಲ್ ಎಫೆಕ್ಟ್ಸ್- ಗಾಡ್‌ಜಿಲ್ಲಾ ಮೈನಸ್ ಒನ್
ಅತ್ಯುತ್ತಮ ಸಂಕಲನ- ಓಪನ್‌ಹೈಮರ್
Advertisement. Scroll to continue reading.