ಹುಬ್ಬಳ್ಳಿ: ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್‌ನಿಂದ ಅಮಾನತು ಮಾಡಲಾಗಿದೆ.
ಹುಬ್ಬಳ್ಳಿಯಲ್ಲಿ ಕೋರ್ ಕಮಿಟಿ ಸಭೆ ನಡೆಸಲಾಗಿತ್ತು. ಇದಾದ ಬಳಿಕ ಮಾಜಿ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್‌ಐಟಿ ತನಿಖೆಯ ವರದಿ ಬರುವವರೆಗೆ ಪಕ್ಷದಿಂದ ಅಮಾನತು ಮಾಡಲಾಗುತ್ತದೆ. ಒಂದು ವೇಳೆ ಎಸ್‌ಐಟಿ ತನಿಖೆಯಲ್ಲಿ ಪ್ರಜ್ವಲ್ ರೇವಣ್ಣ ತಪ್ಪಿತಸ್ಥ ಎಂದು ಸಾಬೀತಾದರೆ ಶಾಶ್ವತವಾಗಿ ಅಮಾನತು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಜ್ವಲ್ ಮೇಲಿನ ಎಸ್ ಐ ಟಿ ತನಿಖೆಯನ್ನು ಸ್ವಾಗತ ಮಾಡಿದ್ದೇವೆ. ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಕಮಿಟಿಯಲ್ಲಿ ತೀರ್ಮಾನವಾಗಿದೆ. ಪಕ್ಷದಿಂದ ಅಮಾನತು ಮಾಡಲು ದೇವೆಗೌಡರಿಗೆ ಶಿಫಾರಸು ಮಾಡಲಾಗಿತ್ತು. ಅವರು ತಕ್ಷಣದಿದಲೇ ಜಾರಿಗೆ ಬರುವಂತೆ ಅಮಾನತು ಮಾಡಿದ್ದಾರೆ. ಎಷ್ಟು ದಿನ ಅಂತ ಇಲ್ಲ. ನಾನು ರಣಹೇಡಿ ಅಲ್ಲ. ಪ್ರತಿಭಟನೆ ಮಾಡಿ ನಮ್ಮನ್ನು ಹೆದರಿಸಿದ್ರೆ, ನಾನು ನಮ್ಮ ಕಾರ್ಯಕರ್ತರಿಗೆ ಕರೆ ಕೊಟ್ಟ್ರೆ ನಾಳೆ ನೀವು ಬೀದಿಯಲ್ಲಿ ಓಡಾಡೋಕೆ ಆಗಲ್ಲ ಎಂದರು.
Advertisement. Scroll to continue reading.
ಯಾವ ಕುಟುಂಬಕ್ಕೆ ಅನ್ಯಾಯ ಆಗಬಾರದು. ಮಹಿಳೆಯರ ಪರ ನಮ್ಮ ಪಕ್ಷವಿದೆ. ಚುನಾವಣಾ ಐದು ಮೊದಲು ಪೆನ್ ಡ್ರೈವ್ ಬಿಡುಗಡೆ ಮಾಡಲಾಗಿದೆ. ಮಹಿಳಾ ಆಯೋಗದ ವರದಿ ಮೇಲೆ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ ಎಂದರು.