ಮೈಸೂರು: ಮೈಸೂರಿನ ತಂಡವೊಂದು ಓಂಕಾರ್ ಸಂಸ್ಥೆಯ ಸಹಯೋಗದಲ್ಲಿ ಮಂತ್ರಾಲಯದ ಗುರು ರಾಘವೇಂದ್ರ ಮಠದಲ್ಲಿ ಮೇ 8ರಂದು ದಾಖಲೆಯ ಬೃಹತ್ ರಂಗೋಲಿ ಬಿಡಿಸಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಂಗೋಳಿ ಕಲಾವಿದರ ತಂಡದ ಪುನೀತ್, ಒಂಭತ್ತು ಮಂದಿಯ ತಂಡ ಈ ಸಾಹಸಕೈಗೊಳ್ಳಲಿದೆ. ಸುಮಾರು 20 ಸಾವಿರ ಸ್ಕ್ವೇರ್ ಫೀಟ್ ಜಾಗದಲ್ಲಿ ರಾಘವೇಂದ್ರ ಸ್ವಾಮಿಯ ರಂಗೋಲಿ ರಚಿಸಲಾಗುವುದು. ಇದಕ್ಕಾಗಿ ಸುಮಾರು 2 ಸಾವಿರ ಕೆ.ಜಿ. ರಂಗೋಲಿ ಬಣ್ಣದ ಹುಡಿಯನ್ನು ಬಳಸಲಾಗುವುದು. ಈ ರಂಗೋಲಿ ರಚಿಸಲು 12 ಗಂಟೆ ಸಮಯ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಈ ಮೂಲಕ ಈ ರಂಗೋಲಿ ವಿಶ್ವ ಮಟ್ಟದ ದಾಖಲೆ ನಿರ್ಮಿಸಲಿದೆ. ಇದಕ್ಕಾಗಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನ ಪ್ರತಿನಿಧಿಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಲಾಗಿದೆ ಎಂದರು.
Advertisement. Scroll to continue reading.
ಸುದ್ದಿಗೋಷ್ಠಿಯಲ್ಲಿ ಓಂಕಾರ್ ಸಂಸ್ಥೆಯ ಮಾಲಕ ಅಭಿಲಾಷ್, ರಂಗೋಲಿ ಕಲಾವಿದರಾದ ಲಕ್ಷ್ಮೀ, ಪುನೀತ್ ರಾಯಣ್ಣ ಹಾಗೂ ಮಂಜುನಾಥ್ ಉಪಸ್ಥಿತರಿದ್ದರು.