ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ತುಂಬಾ ಸಾಮಾನ್ಯವಾಗಿದೆ. ಕೆಲವರು ವಿಪರೀತ ಹೊಟ್ಟೆ, ಸೊಂಟ ನೋವು ತಾಳಲಾರದೆ ಒದ್ದಾಡುತ್ತಾರೆ. ನೋವು ನಿವಾರಣೆಗೆ ಮಾತ್ರೆಗಳನ್ನು ತೆಗೆದುಕೊಳ್ಳುವವರು ಇದ್ದಾರೆ. ಈಗ ಇದೇ ರೀತಿ ನೋವಿನ ಮಾತ್ರೆ ತೆಗೆದುಕೊಂಡ ಯುವತಿಯೊಬ್ಬಳು ಕೋಮಾಗೆ ಜಾರಿದ ಘಟನೆ ವರದಿಯಾಗಿದೆ.
ಬ್ರೆಜಿಲ್‌ನ ಜಾಕ್ವೆಲಿನ್ ಗಮಾಕ್ ಎಂಬ ಯುವತಿ ಮುಟ್ಟಿನ ನೋವು ತಾಳಲಾರದೇ ನೋವು ನಿವಾರಕ ಮಾತ್ರೆ ಸೇವಿಸಿದ್ದು, ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿದ್ದು ಕೋಮಾಗೆ ಜಾರಿದ್ದಾಳೆ. ಯುವತಿ ಮುಟ್ಟಿನ ನೋವಿಗೆ ಐಬುಪ್ರೊಫೆನ್ ಮಾತ್ರೆ ಸೇವನೆ ಮಾಡಿದ್ದಾಳೆ. ಮಾತ್ರೆ ಸೇವಿಸಿದ ಕೆಲ ಹೊತ್ತಿನ ಬಳಿಕ ಕಣ್ಣು ನೋವು ಹಾಗೂ ಮೈ ಮೇಲೆ ಗುಳ್ಳೆ ಕಾಣಿಸಿಕೊಂಡಿದೆ. ತಕ್ಷಣ ಆಕೆಯ ಪೋಷಕರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಯುವತಿಯನ್ನು ಐಸಿಯುಗೆ ದಾಖಲಿಸಿದ ಕೆಲ ಹೊತ್ತಿನಲ್ಲೇ ಕೋಮಾಗೆ ಜಾರಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಜಾಕ್ವೆಲಿನ್, ಸ್ಟೀವನ್ಸ್-ಜಾನ್ಸನ್ ಸಿಂಡ್ರೋಮ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಪರಿಣಾಮ ಆಕೆ ತೆಗೆದುಕೊಂಡ ನೋವು ನಿವಾರಕ ಮಾತ್ರೆ ಪ್ರಾಣಕ್ಕೆ ಕಂಟಕವಾಗಿದೆ. ಸದ್ಯ 17 ದಿನಗಳ ಬಳಿಕ ಯುವತಿ ಕೋಮಾದಿಂದ ಹೊರಬಂದಿದ್ದು, ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ ಎಂದು ವರದಿಯಾಗಿದೆ.
Advertisement. Scroll to continue reading.