ನವದೆಹಲಿ: ಭಾರತದಲ್ಲಿ ಬಹುಸಂಖ್ಯಾತ ಹಿಂದೂಗಳ ಸಂಖ್ಯೆ ಬಹಳ ಕುಸಿತವಾಗಿದೆ ಎಂದು ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿಯೊಂದು ವರದಿ ಪ್ರಕಟಿಸಿದೆ.
ಶಮಿಕಾ ರವಿ, ಅಪೂರ್ವ್ ಕುಮಾರ್ ಮಿಶ್ರಾ, ಅಬ್ರಹಾಂ ಜೋಸ್ ಅವರಿದ್ದ ತಂಡ 1950 ಮತ್ತು 2015ರ ನಡುವೆ 167 ದೇಶಗಳಲ್ಲಿರುವ ಧರ್ಮಗಳನ್ನು ಅಧ್ಯಯನ ಮಾಡಿ ವರದಿಯನ್ನು ಬಿಡುಗಡೆ ಮಾಡಿದೆ. ಲೋಕಸಭಾ ಚುನಾವಣಾ ಸಮಯದಲ್ಲಿ ಈ ವರದಿ ಬಿಡುಗಡೆ ಮಾಡಿದ್ದು ರಾಜಕೀಯ ಪಕ್ಷಗಳ ಮಧ್ಯೆ ಮತ್ತೊಂದು ವಾಕ್ಸಮರಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ವರದಿಯಲ್ಲಿ ಏನಿದೆ?
1950 ಮತ್ತು 2015 ರ ನಡುವೆ ಭಾರತದಲ್ಲಿ ಹಿಂದೂಗಳ ಪ್ರಮಾಣ 7.8% ರಷ್ಟು ಕುಸಿತವಾದರೆ ಮುಸ್ಲಿಮರ ಪ್ರಮಾಣ 53% ಏರಿಕೆಯಾಗಿದೆ. 1950ರಲ್ಲಿ 84.68% ಹಿಂದೂಗಳಿದ್ದರೆ ಈಗ ಇದು 78.06% ಇಳಿಕೆಯಾಗಿದೆ. ಮುಸ್ಲಿಮ್ ಜನಸಂಖ್ಯೆ 9.84% ಇದ್ದರೆ ಈಗ ಇದು 14.09% ಏರಿಕೆಯಾಗಿದೆ.
Advertisement. Scroll to continue reading.
ಭಾರತದಲ್ಲಿ ಹಿಂದೂ ಜನಸಂಖ್ಯೆಯು ಕುಗ್ಗಿದರೆ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಮತ್ತು ಸಿಖ್ ಜನಾಂಗವರ ಸಂಖ್ಯೆ ಹೆಚ್ಚಳವಾದರೆ ಜೈನ ಮತ್ತು ಪಾರ್ಸಿಗಳ ಸಂಖ್ಯೆ ಕಡಿಮೆಯಾಗಿದೆ.
ಕೈಸ್ತರು 5.38%, ಸಿಖ್ 6.58%, ಬೌದ್ಧ 0.81% ಪ್ರಮಾಣದಲ್ಲಿ ಏರಿಕೆಯಾಗಿದೆ. 1950 ರಲ್ಲಿ ಕ್ರೈಸ್ತರ ಸಂಖ್ಯೆ 2.24 ಇದ್ದರೆ 2015ರಲ್ಲಿ 2.36% ಏರಿದೆ. 1950 ರಲ್ಲಿ ಸಿಖ್ಬರ ಸಂಖ್ಯೆ 1.24% ಇದ್ದರೆ 2015ರಲ್ಲಿ 1.85% ಏರಿಕೆಯಾಗಿದೆ. 1950 ರಲ್ಲಿ ಬೌದ್ಧರ ಸಂಖ್ಯೆ 0.05% ಇದ್ದರೆ 0.81% ಏರಿಕೆಯಾಗಿದೆ.
ಜೈನರ ಸಂಖ್ಯೆ 1950ರಲ್ಲಿ 0.45% ಇದ್ದರೆ 2015ರಲ್ಲಿ 0.36% ಇಳಿದಿದೆ. ಪಾರ್ಸಿ ಜನಾಂಗದ ಸಂಖ್ಯೆ 85% ಇಳಿಕೆಯಾಗಿದ್ದು 0.03% ನಿಂದ ಇದು 0.004% ಇಳಿದಿದೆ.
ಪಾಕಿಸ್ತಾನದಲ್ಲಿ 3.75%, ಬಾಂಗ್ಲಾದೇಶ 18.55% ಬಹುಸಂಖ್ಯಾತ ಮುಸ್ಲಿಮರ ಸಂಖ್ಯೆ ಹೆಚ್ಚಳವಾಗಿದೆ. ಫ್ರಾನ್ಸ್‌ನಲ್ಲಿ 36.76%, ಯುಕೆ 25.29% ಅಮೆರಿಕದಲ್ಲಿ 45.80% ಕ್ರೈಸ್ತರ ಸಂಖ್ಯೆ ಇಳಿಕೆಯಾಗಿದೆ.
Advertisement. Scroll to continue reading.
ಅಲ್ಪಸಂಖ್ಯಾತರ ಏರಿಕೆಗೆ ಕಾರಣ ಏನು?
ಅಲ್ಪಸಂಖ್ಯಾತರ ಜೀವನವನ್ನು ಸುಧಾರಿಸಲು ಭಾರತದ ಸರ್ಕಾರ ನೀತಿಗಳು, ರಾಜಕೀಯ ನಿರ್ಧಾರಗಳು, ಭಾರತದಲ್ಲಿ ವೈವಿಧ್ಯತೆ ವಾತಾವರಣದಿಂದಾಗಿ ಭಾರತದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ಏರಿಕೆಯಾಗಿದೆ.