ಕ್ರೀಡೆ

ಎಚ್ಚರ ತಪ್ಪಿದರೆ 5 ರನ್ ಪೆನಾಲ್ಟಿ!: ಟಿ20 ವಿಶ್ವಕಪ್‌ನ ಈ ನಿಯಮದ ಬಗ್ಗೆ ನಿಮಗೆಷ್ಟು ಗೊತ್ತು?

0

2024ರ ಟಿ20 ವಿಶ್ವಕಪ್ ಮೆಗಾ ಈವೆಂಟ್ ಜೂನ್ 2ರಿಂದ ಪ್ರಾರಂಭವಾಗಲಿದೆ. 2007ರಿಂದ ಆರಂಭವಾದ ಈ ಮಿನಿ ವಿಶ್ವಸಮರ ಈಗಾಗಲೇ 8 ಆವೃತ್ತಿಗಳನ್ನು ಮುಗಿಸಿದ್ದು, 9ನೇ ಸೀಸನ್‌ ‌ಗೆ ಕಾಲಿಟ್ಟಿದೆ. ಕಳೆದಿರುವ 8 ಆವೃತ್ತಿಗಳಲ್ಲೂ ಐಸಿಸಿ ಹಲವು ನೂತನ ನಿಯಮಗಳನ್ನು ಈ ಮಾದರಿಯಲ್ಲಿ ಅಳವಡಿಸಿಕೊಂಡಿದೆ. ಅದರಂತೆ ಈ ಬಾರಿಯೂ ನೂತನ ನಿಯಮವೊಂದು ಅಳವಡಿಸಿಕೊಂಡಿದೆ. ಆ ನಿಯಮವೇ ಸ್ಟಾಪ್ ಕ್ಲಾಕ್ ನಿಯಮ.

ಟಿ20 ವಿಶ್ವಕಪ್‌ನಲ್ಲಿ ನಿಗದಿತ ಸಮಯದಲ್ಲಿ ತಮ್ಮ ಓವರ್‌ಗಳನ್ನು ಪೂರ್ಣಗೊಳಿಸದ ತಂಡಗಳಿಗೆ ಈ ನಿಯಮ ದುಬಾರಿಯಾಗುವುದಂತೂ ಖಚಿತ. ಪ್ರಯೋಗವಾಗಿ ಈ ನಿಯಮವು ಯಶಸ್ವಿಯಾದ ನಂತರ ಐಸಿಸಿ, ಈ ವಿಶ್ವಕಪ್‌ನಿಂದ ವೈಟ್ ಬಾಲ್ ಮಾದರಿಯಲ್ಲಿ ಸ್ಟಾಪ್ ಕ್ಲಾಕ್ ನಿಯಮವನ್ನು ಬಳಸಲು ಮುಂದಾಗಿದೆ.

ಏನಿದು ಸ್ಟಾಪ್ ಕ್ಲಾಕ್ ನಿಯಮ?

ಈ ನಿಯಮದ ಪ್ರಕಾರ ಎರಡು ಓವರ್‌ಗಳ ನಡುವೆ ತಂಡಕ್ಕೆ ಮುಂದಿನ ಓವರ್ ಆರಂಭಿಸಲು 60 ಸೆಕೆಂಡ್‌ ಸಮಯಾವಕಾಶವನ್ನು ನೀಡಲಾಗುತ್ತದೆ. ಈ ಸಮಯದ ಮಧ್ಯಂತರದಲ್ಲಿ ಬೌಲಿಂಗ್ ತಂಡವು ಮುಂದಿನ ಓವರ್ ಅನ್ನು ಪ್ರಾರಂಭಿಸಬೇಕಾಗುತ್ತದೆ. ಒಂದು ಓವರ್ ಮುಗಿದ ತಕ್ಷಣ, ಮೂರನೇ ಅಂಪೈರ್ ಈ ನಿಯಮವನ್ನು ಅನುಷ್ಠಾನಕ್ಕೆ ತರುತ್ತಾರೆ. ಈ ಸಮಯದ ಮಿತಿಯೊಳಗೆ ಓವರ್ ಪ್ರಾರಂಭವಾಗದಿದ್ದರೆ, ಮೈದಾನದಲ್ಲಿರುವ ಅಂಪೈರ್, ಬೌಲಿಂಗ್ ತಂಡಕ್ಕೆ ಎರಡು ಎಚ್ಚರಿಕೆಗಳನ್ನು ನೀಡುತ್ತಾರೆ. ಮೂರನೇ ಎಚ್ಚರಿಕೆಯಲ್ಲಿ ಐದು ರನ್‌ಗಳ ದಂಡ ವಿಧಿಸಲಾಗುತ್ತದೆ. ಈ ರನ್‌ಗಳು ಬ್ಯಾಟಿಂಗ್ ತಂಡದ ಖಾತೆಗೆ ಸೇರ್ಪಡೆಯಾಗಲಿವೆ.

Advertisement. Scroll to continue reading.

ಡಿ. 23 ರಂದು ಪ್ರಯೋಗವಾಗಿ ಜಾರಿ

ಐಸಿಸಿ ಡಿಸೆಂಬರ್ 2023 ರಿಂದ ವೈಟ್ ಬಾಲ್ ಮಾದರಿಯಲ್ಲಿ ಈ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮವು ಪಂದ್ಯದ ಸಮಯದಲ್ಲಿ 20 ನಿಮಿಷಗಳ ಸಮಯವನ್ನು ಉಳಿಸುತ್ತದೆ. ಈ ಯಶಸ್ಸಿನಿಂದ ಉತ್ತೇಜಿತವಾದ ಐಸಿಸಿ, ಈ ನಿಯಮವನ್ನು ಟಿ20 ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಜಾರಿಗೆ ತರುತ್ತಿದೆ.

ಅನ್ವಯವಾಗದ ಸಂದರ್ಭ

ವಾಸ್ತವವಾಗಿ ಪಂದ್ಯದ ವೇಳೆ ಕೆಲವು ಸಂದರ್ಭಗಳಲ್ಲಿ ಈ ನಿಯಮ ಬಳಸಲಾಗುವುದಿಲ್ಲ. ಆದಾಗ್ಯೂ, ಈ ನಿಯಮವನ್ನು ಬಳಸುವುದು ಹಾಗೂ ಬಳಸದಿರುವುದು ಸಂಪೂರ್ಣವಾಗಿ ಮೂರನೇ ಅಂಪೈರ್ ಮೇಲೆ ಅವಲಂಬಿತವಾಗಿರುತ್ತದೆ. ಹೊಸ ಬ್ಯಾಟ್ಸ್‌ಮನ್ ಕ್ರಿಸ್​ಗೆ ಬರುವ ಸಂದರ್ಭದಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ. ಅಲ್ಲದೆ ಅಧಿಕೃತ ಪಾನೀಯಗಳ ವಿರಾಮದ ಸಮಯದಲ್ಲೂ ಈ ನಿಯಮದಿಂದ ರಿಯಾಯಿತಿ ಇರುತ್ತದೆ. ಬ್ಯಾಟ್ಸ್‌ಮನ್ ಅಥವಾ ಫೀಲ್ಡರ್‌ಗೆ ಗಾಯವಾದಾಗ ಅಥವಾ ಫೀಲ್ಡಿಂಗ್ ತಂಡದಿಂದ ಸಮಯ ವ್ಯರ್ಥವಾಗದ ಸಂದರ್ಭದಲ್ಲೂ ಈ ನಿಯಮವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com