ನವದೆಹಲಿ : ಭಾನುವಾರ ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಮೋದಿ ಜೊತೆಗೆ 71 ಸಂಸದರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.
ನಿತಿನ್ ಗಡ್ಕರಿ ರಸ್ತೆ ಹಾಗೂ ಸಾರಿಗೆ ಸಚಿವಾಲಯ, ಎಸ್ ಜೈಶಂಕರ್ ವಿದೇಶಾಂಗ ಸಚಿವ ಖಾತೆ ಉಳಿಸಿಕೊಂಡಿದ್ದಾರೆ. ಅಮಿತ್ ಶಾ ಈ ಬಾರಿಯೂ ಗೃಹ ಸಚಿವರಾಗಿ ಮುಂದುವರಿಯಲಿದ್ದಾರೆ.
ರಾಜನಾಥ್ ಸಿಂಗ್‌ಗೆ ಕಳೆದ ಬಾರಿಯಂತೆ ಈ ಬಾರಿಯೂ ರಕ್ಷಣಾ ಖಾತೆ ನೀಡಲಾಗಿದೆ. ಅಶ್ವಿನಿ ವೈಷ್ಣವ್‌ಗೆ ಮಾಹಿತಿ ಹಾಗೂ ತಂತ್ರಜ್ಞಾನ ಖಾತೆ ಹಾಗೂ ರೈಲ್ವೇ ಖಾತೆ ನೀಡಲಾಗಿದೆ. ನಿರ್ಮಲಾ ಸೀತಾರಾಮನ್‌ಗೆ ಎರಡನೇ ಬಾರಿಗೆ ಹಣಕಾಸು ಖಾತೆ ಹಂಚಿಕೆ ಮಾಡಲಾಗಿದೆ.
Advertisement. Scroll to continue reading.
ಮನೋಹರ್ ಲಾಲ್ ಖಟ್ಟರ್‌ಗೆ ಇಂಧನ ಹಾಗೂ ವಸತಿ ಖಾತೆ ನೀಡಲಾಗಿದೆ. ಜೆಪಿ ನಡ್ಡಾಗೆ ಆರೋಗ್ಯ ಖಾತೆ ನೀಡಲಾಗಿದೆ. ಪಿಯೂಷ್ ಗೋಯೆಲ್‌ಗೆ ವಾಣಿಜ್ಯ ಖಾತೆ ನೀಡಲಾಗಿದೆ. ಧರ್ಮೇಂದ್ರ ಪ್ರಧಾನ್‌ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ನೀಡಲಾಗಿದೆ. ಮಾನ್ಸುಕ್ ಮಾಂಡವಿಯಾಗೆ ಕಾರ್ಮಿಕ ಸಚಿವಾಲಯ ಖಾತೆ ನೀಡಲಾಗಿದೆ. ಶಿವರಾಜ್ ಸಿಂಗ್‌ಗೆ ಕೃಷಿ ಖಾತೆ ನೀಡಲಾಗಿದೆ. ಶೋಭಾ ಕರಂದ್ಲಾಜೆಗೆ ಸಣ್ಣ ಮತ್ತು ಅತೀ ಸೂಕ್ಷ್ಮ ಕೈಗಾರಿಕೆ ರಾಜ್ಯ ಖಾತೆ ಹಂಚಿಕೆ ಮಾಡಲಾಗಿದೆ.
ಹೆಚ್‌ಡಿ ಕುಮಾರಸ್ವಾಮಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ನೀಡಲಾಗಿದೆ. ಅನ್ನಪೂರ್ಣ ದೇವಿಗೆ ಮಹಿಳಾ ಮತ್ತು ಕಲ್ಯಾಣ ಇಲಾಖೆ ನೀಡಲಾಗಿದೆ.
ಕೃಷಿ – ಶಿವರಾಜ್ ಸಿಂಗ್ ಚೌಹಾಣ್
ವಿದ್ಯುತ್ ಮತ್ತು ನಗರ ವ್ಯವಹಾರಗಳ ಸಚಿವಾಲಯ – ಮನೋಹರ್ ಲಾಲ್ ಖಟ್ಟರ್
Advertisement. Scroll to continue reading.
ವಾಣಿಜ್ಯ – ಪಿಯೂಷ್ ಗೋಯಲ್
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ – ಹರ್ದೀಪ್ ಸಿಂಗ್ ಪುರಿ
ರೈಲ್ವೆ ಮತ್ತು ಮಾಹಿತಿ ಮತ್ತು ಪ್ರಸಾರ – ಅಶ್ವಿನಿ ವೈಷ್ಣವ್
ಶಿಕ್ಷಣ – ಧರ್ಮೇಂದ್ರ ಪ್ರಧಾನ್
Advertisement. Scroll to continue reading.
ಆರೋಗ್ಯ – ಜೆಪಿ ನಡ್ಡಾ
ಕಾರ್ಮಿಕ ಮತ್ತು ಕ್ರೀಡೆ – ಮನ್ಸುಖ್ ಮಾಂಡವಿಯಾ
ಪರಿಸರ – ಭೂಪೇಂದ್ರ ಯಾದವ್
ವಿಮಾನಯಾನ – ರಾಮ್ ಮೋಹನ್ ಯಾದವ್
Advertisement. Scroll to continue reading.
ಸಂಸದೀಯ ವ್ಯವಹಾರಗಳು – ಕಿರಣ್ ರಿಜಿಜು
MSME – ಜಿತನ್ ರಾಮ್ ಮಾಂಝಿ
ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ – ಪ್ರಲ್ಹಾದ್ ಜೋಶಿ
ಉಕ್ಕು, ಭಾರೀ ಕೈಗಾರಿಕೆ – ಹೆಚ್ ಡಿ ಕುಮಾರಸ್ವಾಮಿ
Advertisement. Scroll to continue reading.
ಚಿರಾಗ್ ಪಾಸ್ವಾನ್ – ಆಹಾರ ಸಂಸ್ಕರಣಾ ಉದ್ಯಮ