ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ : ರಮೇಶ್ ಜಾರಕಿಹೊಳಿ
Published
0
ಬೆಂಗಳೂರು : ಸಿಡಿಯನ್ನು ನಾಲ್ಕು ತಿಂಗಳ ಹಿಂದೆಯೇ ಮಾಡಲಾಗಿದೆ. ನನಗೆ ಮೊದಲೇ ತಿಳಿದಿತ್ತು. ನನ್ನ ಬಗ್ಗೆ ರಾಜಕೀಯ ಷಡ್ಯಂತ್ರ ನಡೆದಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಸಿಡಿ ಪ್ರಕರಣದ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಒಬ್ಬ ಮಹಾನ್ ನಾಯಕನಿಂದ ಈ ಷಡ್ಯಂತ್ರ ನಡೆದಿದೆ. ಅವರ ಬಗ್ಗೆ ಈಗ ಹೇಳಲು ಆಗುವುದಿಲ್ಲ. ಸಿಡಿ ಬಿಡುಗಡೆ ಬಗ್ಗೆ ಹೈಕಮಾಂಡ್ ನಿಂದ ಮೊದಲೇ ನನಗೆ ಮಾಹಿತಿ ಸಿಕ್ಕಿತ್ತು. ಎಂದಿದ್ದಾರೆ.
ನನ್ನ ವಿರುದ್ಧ ಷಡ್ಯಂತ್ರ ಮಾಡಿದವರನ್ನು ಸುಮ್ಮನೆ ಬಿಡುವುದಿಲ್ಲ. ಅವರು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ. ನನ್ನ ವಿರೋಧಿಗಳಿಗೆ ಇದೊಂದು ಅಸ್ತ್ರವಾಗಿದೆ. ನಾನು ಖಾತೆ ಬೇಕೆಂದು ಕೇಳಲು ಹೋಗುವುದಿಲ್ಲ. ನನಗೆ ರಾಜಕಾರಕ್ಕಿಂತ ಕುಟುಂಬದ ಮರ್ಯಾದೆ ಮುಖ್ಯ ಎಂದರು.
ಬೆಂಗಳೂರಿನ ಎರಡು ಸ್ಥಳಗಳಲ್ಲಿ ಷಡ್ಯಂತ್ರ ನಡೆದಿದ್ದು, ಯಶವಂತಪುರ ಮತ್ತು ಒರೆಯಾನ್ ಮಾಲ್ ಬಳಿ ಷಡ್ಯಂತ್ರ ನಡೆದಿದೆ. ಒರೆಯಾನ್ ಅಕ್ಕ ಪಕ್ಕದಲ್ಲಿ ಐದನೇ ಮಹಡಿಯಲ್ಲಿ, ಯಶವಂತಪುರದ 4 ನೇ ಮಹಡಿಯಲ್ಲಿ ಈ ಷಡ್ಯಂತ್ರ ನಡೆದಿದ್ದು, ಯುವತಿಗೆ 5 ಕೋ.ರೂ, ವಿದೇಶದಲ್ಲಿ ಎರಡು ಅಪಾರ್ಟ್ ಮೆಂಟ್ ನೀಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಕುರಿತು ರೇವಣ್ಣ, ಕುಮಾರಸ್ವಾಮಿಯವರೂ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.