ಕಾಪು : ಮಾರ್ಚ್ 13 ಕ್ಕೆ ಪೊಲಿಪು ದರ್ಗಾ ಉರೂಸ್; 14 ಕ್ಕೆ ಖಾಝಿ ಸ್ವೀಕಾರ
Published
0
ಕಾಪು: ಇಲ್ಲಿನ ಪೊಲಿಪು ಜಾಮಿಯಾ ಮಸೀದಿಯ ಮುಂಭಾಗದಲ್ಲಿರುವ ಸಯ್ಯದ್ ಶಂಸುದ್ದೀನ್ ವಲಿಯುಲ್ಲಾಹಿರವರ ದರ್ಗಾದ ಉರೂಸ್ ಕಾರ್ಯಕ್ರಮವು ಮಾರ್ಚ್ 13 ರಂದು ನಡೆಯಲಿರುವುದಾಗಿ ಜಮಾತ್ ಕಮಿಟಿ ಉಪಾಧ್ಯಕ್ಷ ಅಮೀರ್ ಹಂಝ ತಿಳಿಸಿದ್ದಾರೆ.
ಮಂಗಳವಾರ ಕಾಪು ಪ್ರೆಸ್ ಕ್ಲಬ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ ಹಾಜ್ ಪಿ.ಬಿ ಅಹಮದ್ ಮುಸ್ಲಿಯಾರ್(ಕಾಪು ಉಸ್ತಾದ್) ಇವರು ಧ್ವಜಾರೋಹಣ ಮಾಡುವ ಮೂಲಕ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.ಆ ಬಳಿಕ ಸಂದಲ್ ಮೆರವಣಿಗೆ ನಡೆಯಲಿದ್ದು,ಮಗ್ರಿಬ್ ನಮಾಝಿನ ಬಳಿಕ ಸೈಯದ್ ಶಂಸುದ್ದೀನ್ ವಲಿಯುಲ್ಲಾರವರ ಕುಟುಂಬಸ್ಥರಾದ ಸೈಯದ್ ಸಿರಾಜುದ್ದೀನ್ ಬಾ ಅಲವಿ ತಂಗಲ್ ರವರ ನೇತೃತ್ವದಲ್ಲಿ ಸಾಮೂಹಿಕ ಕೂಟು ಝಿಯಾರತ್ ನೆರವೇರಲಿದೆ ಎಂದರು.
ಸಭಾ ಕಾರ್ಯಕ್ರಮವನ್ನು ಅಲ್ ಹಾಜ್ ಪಿಬಿ ಮುಸ್ಲಿಯಾರ್ ಉದ್ಘಾಟಿಸಲಿದ್ದು,ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಅಮೀರ್ ಹಂಝ ಇವರು ವಹಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮಾಸ್ಟರ್ ಅವರನ್ನು ಸ್ವಾಗತಿಸಲಿದ್ದು, ಪೊಲಿಪು ಜಾಮಿಯಾ ಮಸೀದಿ ಮಸೀದಿಯ ಖತೀಬರಾದ ಇಝ್ಹ ಮೊಹಮ್ಮದ್ ಇರ್ಷಾದ್ ಸಅದಿಯವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಇಶಾ ನಮಾಜಿನ ಬಳಿಕ ಬಹು ಹುಸೇನ್ ಅಹ್ಸನಿ ಮೂಈನ್ ಇವರು ಧಾರ್ಮಿಕ ಪ್ರವಚನ ನೀಡಲಿದ್ದಾರೆ ಎಂದರು.
14 ಕ್ಕೆ ಖಾಝಿ ಸ್ವೀಕಾರ:
ಪೊಲಿಪು ಜಾಮಿಯಾ ಮಸೀದಿಯಲ್ಲಿ ಕಳೆದ ಸುಮಾರು 52 ವರ್ಷಗಳ ಕಾಲ ಧಾರ್ಮಿಕ ಸೇವೆಯನ್ನು ಮಾಡಿರುವಂತಹ ಪಿಬಿ ಅಹ್ಮದ್ ಮುಸ್ಲಿಯಾರ್( ಕಾಪು ಉಸ್ತಾದ್) ಇವರನ್ನು ಕಾಪು ಮೊಹಲ್ಲಾದ ಖಾಝಿ ಯಾಗಿ ನೇಮಕ ಮಾಡಲು ಜಮಾತ್ ಬಾಂಧವರು ತೀರ್ಮಾನಿಸಿದ್ದು,ಅದರಂತೆ ಮಾರ್ಚ್ 14 ರಂದು ಬೆಳಿಗ್ಗೆ 10 ಗಂಟೆಗೆ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿಯವರಾದ ಬಹುಮಾನ್ಯ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ರವರ ನೇತೃತ್ವದಲ್ಲಿ ಪಿಬಿ ಅಹ್ಮದ್ ಮುಸ್ಲಿಯಾರ್( ಕಾಪು ಉಸ್ತಾದ್) ಇವರು ಖಾಝಿ ಸ್ವೀಕಾರ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಸಯ್ಯದ್ ಜಾಫರ್ ಅಸ್ಸಖಾಫ್ ತಂಙಲ್ ಕೋಟೇಶ್ವರ ರವರು ದುಆ ಮಾಡಲಿದ್ದಾರೆ. ಸೈಯದ್ ಕೆಪಿಎಸ್ ಝೈನುಲ್ ಆಬಿದೀನ್ ಜಮಾಲುಲ್ಲೈಲ್ ತಂಙಳ್ ಕಾಜೂರು ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು,ಪ್ರಧಾನ ಕಾರ್ಯದರ್ಶಿ ಕೆ ಅಬ್ದುಲ್ ಹಮೀದ್ ಮಾಸ್ಟರ್ ಅವರನ್ನು ಸ್ವಾಗತಿಸಲಿದ್ದು,ಪೊಲಿಪು ಜಾಮಿಯಾ ಮಸೀದಿ ಮಸೀದಿಯ ಖತೀಬರಾದ ಇಝ್ಹ ಮೊಹಮ್ಮದ್ ಇರ್ಷಾದ್ ಸಅದಿಯವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಉಡುಪಿ ಜಿಲ್ಲಾ ಸಂಯುಕ್ತ ಜಮಾತ್ ಸಹಾಯಕ ಖಾಝಿಯವರಾದ ಅಬೂ ಶಾಕಿರ್ ಅಬ್ದುಲ್ ರಹಮಾನ್ ಮದನಿ ಮೂಳೂರು ಹಾಗು ಸಂಯುಕ್ತ ಜಮಾತ್ ಅಧ್ಯಕ್ಷರಾದ ಹಾಜಿ ಅಬೂಬಕ್ಕರ್ ನೇಜಾರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಜಿ ಅಮೀರ್ ಹಂಝ ಇವರು ವಹಿಸಲಿದ್ದು,ಸ್ಥಳೀಯ ಎಲ್ಲಾ ಮಸೀದಿಗಳ ಖತೀಬರುಗಳು ಉಪಸ್ಥಿತರಿರುವುದಾಗಿ ಅವರು ತಿಳಿಸಿದ್ದಾರೆ. ಮಧ್ಯಾಹ್ನ 1:00 ಗಂಟೆಯ ಬಳಿಕ ಅನ್ನದಾನ ನಡೆಯಲಿದೆ.