ಉಡುಪಿ: ಪೆರಂಪಳ್ಳಿಯ ಸಮೀಪದ ಮನೆಯಲ್ಲಿಯೇ ಆಹಾರವಿಲ್ಲದೆ ಅಸಹಾಯಕ ಸ್ಥಿತಿಯಲ್ಲಿದ್ದ ಸುಮಾರು 87 ವರ್ಷದ ವೃದ್ಧರೋರ್ವರಿಗೆ ಹೊಸಬೆಳಕು ಆಶ್ರಮ ಬೆಳಕಾಗಿದೆ. ವೃದ್ಧರು ತನ್ನ ಹೆಸರು ಆಪ್ನೋಸ್ ಡಿಸೋಜ್ ಎನ್ನುತ್ತಿದ್ದು, ಸಮೀಪದ ಕೆಲವೊಂದು ಮನೆಯವರು ಹಿಂಸೆ ನೀಡುತ್ತಾರೆ, ಬೆನ್ನಿಗೆ ನೀರು ಸುರಿಯುತ್ತಾರೆ ಎಂದು ಹೇಳುತ್ತಾರೆ. ನೆನಪಿನ ಶಕ್ತಿ ಇಲ್ಲದ ಕಾರಣ ಕೆಲವು ಕ್ಷಣದಲ್ಲಿ ಮರೆತು ಬಿಡುತ್ತಾರೆ. ಚಿಕ್ಕ ಮನೆಯಲ್ಲಿ ಹೀಗೋ ಹಾಗೋ ಜೀವನ ಸಾಗಿಸುತ್ತಿದ್ದು, ಮನೆ ಬೀಳುವ ಸ್ಥಿತಿಯಲ್ಲಿದ್ದು ಅಲ್ಲಿಯೇ ವಾಸವಾಗಿದ್ದು, ಯಾರಾದರೂ ಊಟ ನೀಡಿದರೆ ಊಟ, ಇಲ್ಲವೆಂದಾದಲ್ಲಿ ಆ ದಿನ ಉಪವಾಸವಾಗಿಯೇ ದಿನ ಕಳೆಯುತ್ತಿದ್ದರು. ಹಸಿವಿನಲ್ಲಿ ರಾತ್ರಿ ಸಮಯವೂ ತಿಳಿಯದೆ 12ಗಂಟೆಗೆ ಹೋಗಿ ಪರಿಚಯವೇ ಇಲ್ಲದ ಮನೆಯ ಬಾಗಿಲು ಬಡಿದು, ಊಟ ನೀಡಿ ಅಂದರೆ ಇವರ ತಲೆಯ ಮೇಲೆ ನೀರು ಸುರಿಯುತ್ತಿದ್ದರು ಎನ್ನಲಾಗಿದೆ. ಕ್ರಿಸ್ಟಿಯಲ್ ಡಿಸೋಜ್, ವಿನಯಚಂದ್ರ, ತನುಲಾ ತರುಣ್ ಸಹಕಾರದಿಂದ ರಕ್ಷಿಸಲಾಗಿದೆ.