ರಾಬರ್ಟ್ ಹಾಡು 20 ಮಿಲಿಯನ್ ವೀಕ್ಷಣೆ; ಉತ್ತರ ಕರ್ನಾಟಕ ಭಾಷೆಯ ಸೊಗಸ ಮೆಚ್ಚಿದ ಶ್ರೇಯಾ ಘೋಷಾಲ್
Published
0
ಚಂದನವನ : ಇದೀಗ ಎಲ್ಲೆಡೆಯೂ ರಾಬರ್ಟ್ ಗುಂಗು. ಚಿತ್ರ ತೆರೆ ಕಂಡು ತುಂಬಿದ ಪ್ರದರ್ಶನ ಕಾಣುತ್ತಿದೆ. ಹಾಡುಗಳೂ ಹಿಂದೆ ಬಿದ್ದಿಲ್ಲ. ಚಿತ್ರ ತೆರೆಗೆ ಬರುವ ಮೊದಲೇ ಹಾಡುಗಳು ಸಕತ್ ಹಿಟ್ ಆಗಿದ್ದವು. ಕಣ್ಣು ಹೊಡಿಯಾಕಾ ಹಾಡಂತೂ ತೆಲುಗು ಹಾಗೂ ಕನ್ನಡ ವರ್ಷನ್ ನಲ್ಲಿ ಸಕತ್ ಹಿಟ್ ಆಗಿದೆ. ತೆಲುಗಿನಲ್ಲಿ ಮಂಗ್ಲಿ ಹಾಡಿರುವ ಹಾಡು ಭಾರೀ ಜನಮನ್ನಣೆ ಗಿಟ್ಟಿಸಿ ಕೊಂಡಿದೆ. ಕನ್ನಡದಲ್ಲಿ ಶ್ರೇಯಾ ಘೋಷಾಲ್ ಹಾಡಿದ್ದು, ಉತ್ತರ ಕರ್ನಾಟಕ ಶೈಲಿಯಲ್ಲಿದೆ. ಇದೇ ಮೊದಲ ಭಾರಿಗೆ ಶ್ರೇಯಾ ಘೋಷಾಲ್ ಉತ್ತರ ಕರ್ನಾಟಕ ಭಾಷೆಗೆ ದನಿಯಾಗಿದ್ದಾರೆ.
ಈ ಹಾಡು ಸಕತ್ ಕ್ಲಿಕ್ ಆಗಿರುವ ಬಗ್ಗೆ ಸ್ವತಃ ಶ್ರೇಯಾ ಘೋಷಾಲ್ ಟ್ವಟ್ಟರ್ ನಲ್ಲಿ ಸಂಸತ ಹಂಚಿಕೊಂಡಿದ್ದಾರೆ. `ಕಣ್ಣು ಹೊಡಿಯಾಕ 20 ಮಿಲಿಯನ್ ವೀಕ್ಷಣೆ ಕಂಡಿದೆ. ಇದೇ ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಷೆಯ ಹಾಡನ್ನು ಹಾಡಲು ಅವಕಾಶ ಸಿಕ್ಕಿದ್ದು, ಎಷ್ಟು ಸುಂದರವಾದ ಭಾಷೆ ಮತ್ತು ತುಂಬಾ ವಿನೋದಕರ. ಅರ್ಜುನ್ ಜನ್ಯ, ದರ್ಶನ್, ಯೋಗರಾಜ್ ಭಟ್, ಆಶಾ ಭಟ್, ಆನಂದ್ ಆಡಿಯೋ ಅವರಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.