ಶಿರ್ವ: ಎರಡೂವರೆ ವರ್ಷದ ಮಗುವೊಂದು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಶಿರ್ವ ಸಮೀಪದ ಮುದರಂಗಡಿಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.ಅದಮಾರು, ವಾಜಪೇಯಿ ನಗರದ ಜಯಲಕ್ಷ್ಮೀ ಮತ್ತು ಕೃಷ್ಣ ದಂಪತಿ ಮಗಳು ಪ್ರಿಯಾಂಕ ಮೃತ ಮಗು.
ಮುದರಂಡಿಯಲ್ಲಿ ಪೋಷಕರ ಜೊತೆ ಬಟ್ಟೆ ಅಂಗಡಿಗೆ ಬಂದ ಪುಟ್ಟ ಮಗು ಆಟವಾಡುತ್ತ ಅಂಗಡಿಯ ಪಕ್ಕದಲ್ಲಿದ್ದ ಬಾವಿಗೆ ಬಿದ್ದಿದೆ. ಅಂಗಡಿಯಲ್ಲಿದ್ದ ಮಗು ಕಣ್ಮರೆಯಾದಾಗ ಮನೆ ಮಂದಿ ಹುಡುಕಾಟದಲ್ಲಿ ತೊಡಗಿದ್ದು,ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು.ಕೊನೆಗೆ ಅಲ್ಲೇ ಪಕ್ಕದ ಬಾವಿಯಲ್ಲಿ ಮಗುವಿನ ಬ್ಯಾಗ್ ಮತ್ತು ಹೂ ಕಾಣಿಸಿದ್ದು, ತಕ್ಷಣ ಸ್ಥಳೀಯರು ಹಾಗೂ ಶಿರ್ವ ಪೊಲೀಸರು ಬಾವಿಯಲ್ಲಿ ಹುಡುಕಾಟ ನಡೆಸಿದಾಗ ಮಗು ಆದಾಗಲೇ ನೀರಿನಲ್ಲಿ ಮುಳುಗಿ ಮೃತ ಪಟ್ಟಿತ್ತೆಂದು ತಿಳಿದು ಬಂದಿದೆ.
Advertisement. Scroll to continue reading.