ವಿಕ್ರಾಂತ್ ರೋಣ ಎಂಟ್ರಿಗೆ ಡೇಟ್ ಫಿಕ್ಸ್; ಕಿಚ್ಚ ಅಭಿಮಾನಿಗಳು ಫುಲ್ ಖುಷ್
Published
0
ಚಂದನವನ : ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಸಾಕಷ್ಟು ಸದ್ದು ಮಾಡುತ್ತಿದೆ. ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ವಿಕ್ರಾಂತ್ ರೋಣ ಚಿತ್ರದ ಟೀಸರ್ ಮತ್ತು ಕಟೌಟ್ ವಿಶ್ವ ವಿಖ್ಯಾತ ಬುರ್ಜ್ ಖಲೀಫಾ ಮೇಲೆ ರಾರಾಜಿಸಿ ವಿಶ್ವದ ಗಮನ ಸೆಳೆದಿತ್ತು.
ಇದೀಗ ಚಿತ್ರದ ರಿಲೀಸಿಂಗ್ ಡೇಟ್ ಅನೌನ್ಸ್ ಆಗಿದೆ. ಆಗಸ್ಟ್ 19 ರಂದು ಚಿತ್ರ ತೆರೆಗೆ ಬರಲಿದೆ. ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಅನೇಕ ಭಾಷೆಯಲ್ಲಿ ಪ್ರಪಂಚದಾದ್ಯಂತ ತೆರೆಗೆ ಬರಲಿದೆ. ಕೊರೋನಾ ಎರಡನೇ ಅಲೆಯ ನಡುವೆ ಚಿತ್ರದ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿರೋದು ಆಶ್ಚರ್ಯ.
ಇನ್ನು, ಈ ಸಿನಿಮಾವನ್ನು ಜ್ಯಾಕ್ ಮಂಜು ನಿರ್ಮಿಸಿದ್ದು, ಸುದೀಪ್ ಜೊತೆ ನಿರೂಪ್ ಭಂಡಾರಿ ಮತ್ತು ನಾಯಕಿಯಾಗಿ ನೀತಾ ಅಶೋಕ್ ಮೊದಲಾದವರು ಪಾತ್ರವಾಗಿದ್ದಾರೆ.