ಕುಂದಾಪುರ : ಕನಿಷ್ಠ ಪಕ್ಷ ಸರಕಾರಕ್ಕೆ ಪ್ರತಿ ಜಿಲ್ಲೆಯಲ್ಲಿ ಒಂದೊಂದು ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆ ಮಾಡಲು ಆಗಲಿಲ್ಲ. ವೆಂಟಿಲೇಟರ್ ತಯಾರಿಸುವ ಘಟಕಗಳಿಗೆ ನೀಡಲು ಒಂದಿಷ್ಟು ಅನುದಾನವಿಲ್ಲ ಎಂದು ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಕಳೆದ ಬಾರಿ ನೂರಾರು ಕೋಟಿ ಹಣವನ್ನು ಮುಖ್ಯ ಮಂತ್ರಿ ಪರಿಹಾರ ನಿಧಿಗೆ ನೀಡಿಲಾಗಿತ್ತು. ಆ ಹಣ ಎಲ್ಲಿ ಹೋಯಿತು? ಬಿಜೆಪಿ ಸರಕಾರ ಕೊರೋನ ನಿಯಂತ್ರಿಸಲು ಸಂಪೂರ್ಣ ವಿಫಲವಾಗಿದೆ. ಬಿಜೆಪಿ ಸರಕಾರ ಸೋಂಕಿತ ಸರಕಾರ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ನವರು ಅಣೆಕಟ್ಟೆಗಳು, ಆಸ್ಪತ್ರೆಗಳು, ಶಾಲೆ-ಕಾಲೇಜುಗಳು, ವಿಶ್ವವಿದ್ಯಾಲಯಗಳು, ಕ್ರೀಡಾಂಗಣಗಳು, ಕಾರ್ಖಾನೆಗಳು, ಮಂದಿರಗಳು ಎಲ್ಲವನ್ನೂ ನಿರ್ಮಿಸಿದ್ದಾರೆ. ಇವರು ಸ್ಮಶಾನಗಳು, ಚಿತಾಗಾರಗಳನ್ನು ಕಟ್ಟಲು ಹೊರಟಿದ್ದಾರೆ!
ಆದರೆ, ಕಾಂಗ್ರೆಸ್ನವರು ದೇಶದ್ರೋಹಿಗಳಾದರು.
ಇವರು ಅಪ್ರತಿಮ ದೇಶಭಕ್ತರಾದರು…! ಎಂದು ಅವರು ಕಿಡಿಕಾರಿದ್ದಾರೆ.
ವರದಿ : ದಿನೇಶ್ ರಾಯಪ್ಪನಮಠ
Advertisement. Scroll to continue reading.