ಮಂಗಳೂರು : ವಿಚಾರಣಾಧೀನ ಖೈದಿಗಳ ಮಧ್ಯೆ ಹೊಡೆದಾಟ ನಡೆದಿರುವ ಘಟನೆ ಕೋಡಿಯಾಲ್ ಬೈಲ್ ನ ಕಾರಾಗೃಹದಲ್ಲಿ ನಡೆದಿದೆ. ಸಮೀರ್, ಅನ್ಸಾರ್ ಹಾಗೂ ಜೈನುದ್ದೀನ್ ಹೊಡೆದಾಡಿಕೊಂಡ ಖೈದಿಗಳು. ಸಮೀರ್ ಎಂಬಾತ ಅನ್ಸಾರ್ ಎಂಬಾತನಿಗೆ ಸ್ಪೂನ್ ಸಹಿತ ಅಡುಗೆ ಪರಿಕರಗಳಿಂದ ಹಲ್ಲೆ ನಡೆಸಿದ್ದು, ಬಳಿಕ ಗಲಾಟೆ ಜೋರಾಗಿದೆ. ಈ ವೇಳೆ ಅನ್ಸಾರ್ ಹಾಗೂ ಜೈನುದ್ದೀನ್ ಗಾಯಗೊಂಡಿದ್ದಾರೆ.
ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿ ಸಮೀರ್ ಎಂಬಾತ ಕಳೆದ ಜುಲೈನಿಂದ ಜೈಲಿನಲ್ಲಿದ್ದಾನೆ. ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣದ ಆರೋಪಿ ಸಮೀರ್ ಹಾಗೂ ಜೈನುದ್ದೀನ್ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣದ ಆರೋಪಿಯಾಗಿದ್ದಾನೆ.
ಗಲಾಟೆಗೆ ಕಾರಣ ತಿಳಿದುಬಂದಿಲ್ಲ. ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Advertisement. Scroll to continue reading.