ಬಾಗ್ದಾದ್ : ಕೋವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಆಮ್ಲಜನಕ ಸ್ಫೋಟಗೊಂಡು 82 ಮಂದಿ ಸಾವನ್ನಪ್ಪಿರುವ ಘಟನೆ ಅಲ್ ಖತೀಬಾ ಆಸ್ಪತ್ರೆಯಲ್ಲಿ ನಡೆದಿದೆ. ತೀವ್ರ ನಿಗಾ ಘಟಕದಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಆಸ್ಪತ್ರೆಯ ಇತರೆ ಅಂತಸ್ತುಗಳಿಗೂ ಬೆಂಕಿ ವ್ಯಾಪಿಸಿದ್ದು, ಆರೋಗ್ಯಾಧಿಕಾರಿಗಳ ನಿರ್ಲಕ್ಷ್ಯವೇ ಘಟನೆಗೆ ಕಾರಣವೆಂದು ಆರೋಪ ಕೇಳಿ ಬರುತ್ತಿದೆ.
ರಾತ್ರಿ ಪಾಳಿಗೆ ಬಂದಿದ್ದ ನರ್ಸ್ ಐಸಿಯುನಲ್ಲಿ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿ ತಕ್ಷಣವೇ ರೋಗಿಗಳನ್ನು ಸ್ಥಳಾಂತರುವ ಕಾರ್ಯ ನಡೆಸಲಾಯಿತು. ಆದರೆ, ಬೆಂಕಿ ತನ್ನ ಕಬಂಧಬಾಹುವನ್ನು ಚಾಚಿಯಾಗಿತ್ತು. ಸತ್ತವರಲ್ಲಿ 28 ರೋಗಿಗಳಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು, ವೆಂಟಿಲೇಟರ್ ಗಳನ್ನು ತೆಗೆದು ರೋಗಿಗಳನ್ನು ಸಾಗಿಸುವ ವೇಳೆ ಹಲವು ರೋಗಿಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆ ನಡೆಯುತ್ತಿದ್ದಂತೆ ಇರಾಕ್ ಪ್ರಧಾನಿ ಮುಸ್ತಾಫಾ ಅಲ್ ಖದಿಮಿ ಸಚಿವ ಸಂಪುಟ ಸಭೆ ನಡೆಸಿದ್ದು, ಖಂಡಿಸಿದ್ದಾರೆ.