Uncategorized

ಕನ್ನಡಿಗನಿಗೆ ಅಮೆರಿಕಾದ ಪ್ರತಿಷ್ಟಿತ ಸಿ.ಎ. ಹಜೆನ್ಟೆಗ್ಲೋ ಪ್ರಶಸ್ತಿ

0

2020ನೇ ಸಾಲಿನ ಅಮೆರಿಕಾದ ಪ್ರತಿಷ್ಟಿತ ಸಿ.ಎ. ಹಜೆನ್ಟೆಗ್ಲೋ ಪ್ರಶಸ್ತಿ ಕನ್ನಡಿಗರೊಬ್ಬರಿಗೆ ದೊರೆತಿದೆ. ಡಾ.ಲಕ್ಷ್ಮೀಕಾಂತ ಮೂನಹಳ್ಳಿ ಈ ಪ್ರಶಸ್ತಿ ಪಡೆದಿರುವ ವ್ಯಕ್ತಿ. Boundary Effects in the Desiccation of Soil Layers with Controlled Environmental Conditions ವನ್ನ Paper of outstanding merit ಎಂದು ಹೆಸರಿಸಲಾಗಿದೆ.

ಮೇ 1, 1977ರಲ್ಲಿ ಕರ್ನಾಟಕದ ಸಿರಾ ತಾಲೂಕಿನ ಹೊಸೂರು ಎಂಬ ಕುಗ್ರಾಮದಲ್ಲಿ ಜನಿಸಿದರು. ಅಪ್ಪ ಶ್ರೀರಾಮಶೇಷ ಖಾಸಗಿ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿದ್ದವರು. ತಾಯಿ ನಾಗಲಕ್ಷ್ಮಿ. ಪ್ರಾಥಮಿಕ ಶಿಕ್ಷಣದ ಮೊದಲ ಎರಡು ವರ್ಷ ಹೊಸೂರಿನಲ್ಲಿ ಕಲಿತರು. ಬೆಂಗಳೂರಿನ ದೇವನಹಳ್ಳಿ ಬಳಿಯ ವಿಜಯಪುರದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದರೆ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬೆಂಗಳೂರಿನ ಪೀಣ್ಯ ಸರಕಾರಿ ಶಾಲೆಯಲ್ಲಿ ಮುಗಿಸಿ, ನಂತರ ಬೆಂಗಳೂರಿನ ಜಗದ್ಗುರು ರೇಣುಕಾಚಾರ್ಯ ಕಾಲೇಜಿನಲ್ಲಿ ಪಿಯುಸಿ, ಎಂ.ಎಸ್.ರಾಮಯ್ಯದಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿ, ಕೆ.ಆರ್.ಇ.ಸಿ.ಯಲ್ಲಿ ಜಿಯೋಟೆಕ್ನಾಲಜಿ ವಿಷಯದಲ್ಲಿ ಎಂಟೆಕ್ ಪದವಿ ಪಡೆದರು. 2007ರಲ್ಲಿ ಬಾರ್ಸಿಲೋನಾ ಯೂನಿವರ್ಸಿಟಿ(ಯುಪಿಸಿ- ಯೂನಿವೆರ್ಸಿದಾದ್ ದೆ ಪಾಲಿಟೆಕ್ನಿಕ್ ದೆ ಕಾತಲೂನ್ಯ) ಇಂದ ಜಿಯೋಮೆಕ್ಯಾನಿಕ್ಸ್ ವಿಷಯದಲ್ಲಿ ಪಿಹೆಚ್ಡಿ ಪದವಿ ಪಡೆದರು.

ನಂತರ ರಿಸರ್ಚ್ ಅಸೋಸಿಯೇಟ್ ಆಗಿ ಪ್ಯಾರಿಸ್ ನಲ್ಲಿ ಒಂದೂವರೆ ವರ್ಷ ಕೆಲಸ ಮಾಡುತ್ತಾರೆ. ನಂತರ ಲಂಡನ್ ನಲ್ಲಿ ಕೆಲಸ. ಯೂನಿವರ್ಸಿಟಿ ಆಫ್ ಟೆಕ್ಸಾಸ್ ಆಂಡ್ ಆಸ್ಟಿನ್ ನಲ್ಲಿ ಮ್ಯಾನೇಜ್ಮೆಂಟ್ ಕೋರ್ಸ್, ಸ್ಪೇನ್ ನ ಮ್ಯಾಡ್ರಿಡ್ ನಲ್ಲಿ ಎಸದೆ(ESADE) ಬ್ಯುಸಿನೆಸ್ ಆಂಡ್ ಲಾ ಸ್ಕೂಲ್ ನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಾರೆ.
ವೃತ್ತಿಗೆ ಸಂಬಂಧಪಟ್ಟ 78 ಲೇಖನಗಳು ಅಂತಾರಾಷ್ಟ್ರೀಯ ಮ್ಯಾಗಜಿನ್ ನಲ್ಲಿ ಪ್ರಕಟಗೊಂಡಿವೆ. 12 ಪೇಟೆಂಟ್ ಗಳು, 569 ಸೈಟೇಷನ್ ಗಳು ಇವರ ಹೆಸರಲ್ಲಿವೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com