ನವದೆಹಲಿ: ಐಪಿಎಲ್ ನ 27ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ
4 ವಿಕೆಟ್ ರೋಚಕ ಜಯ ಗಳಿಸಿದೆ. ಐಪಿಎಲ್ ಸೀಸನ್‌ನಲ್ಲಿ ಎಂಐ 200+ ದೊಡ್ಡ ಮೊತ್ತವನ್ನು ಚೇಸ್ ಮಾಡಿ ಗೆದ್ದ ದಾಖಲೆ ಮುಂಬೈ ಮುಡಿಗೆ ಲಭಿಸಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ ಸೂಪರ್ ಕಿಂಗ್ಸ್
20 ಓವರ್‌ಗೆ 4 ವಿಕೆಟ್ ಕಳೆದು 218 ರನ್ ಗಳಿಸಿತ್ತು. ಫಾಫ್ ಡು ಪ್ಲೆಸಿಸ್ 50 (28), ಮೊಯೀನ್ ಅಲಿ 58 (36), ಅಂಬಾಟಿ ರಾಯುಡು 72 (27), ರವೀಂದ್ರ ಜಡೇಜಾ 22, ಋತುರಾಜ್ ಗಾಯಕ್ವಾಡ್ 4, ಸುರೇಶ್ ರೈನಾ 2 ರನ್ ಗಳಿಸಿದರು.
ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 20 ಓವರ್‌ಗೆ 6 ವಿಕೆಟ್ ಕಳೆದು 219 ರನ್ ಗಳಿಸಿ ಗೆದ್ದಿತು. ಕ್ವಿಂಟನ್ ಡಿ ಕಾಕ್ 38, ರೋಹಿತ್ ಶರ್ಮಾ 35, ಕೃನಾಲ್ ಪಾಂಡ್ಯ 32, ಕೀರನ್ ಪೊಲಾರ್ಡ್ ಅಜೇಯ 87 (34), ಹಾರ್ದಿಕ್ ಪಾಂಡ್ಯ 16 ರನ್ ಗಳಿಸಿ ಗೆಲುವಿಗೆ ಕಾರಣರಾದರು.
ಚೆನ್ನೈ ಇನ್ನಿಂಗ್ಸ್‌ನಲ್ಲಿ ಮುಂಬೈ ಇಂಡಿಯನ್ಸ್, ಟ್ರೆಂಟ್ ಬೌಲ್ಟ್ 1. ಜಸ್‌ಪ್ರೀತ್ ಬೂಮ್ರಾ 1, ಕೀರನ್ ಪೊಲಾರ್ಡ್ 2 ವಿಕೆಟ್ ಪಡೆದರು. ಇನ್ನು ಮುಂಬೈ ಇನ್ನಿಂಗ್ಸ್‌ನಲ್ಲಿ ಸ್ಯಾಮ್ ಕರನ್ 3, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ ಮತ್ತು ಮೋಯಿನ್ ಅಲಿ ತಲಾ 1 ವಿಕೆಟ್ ಪಡೆದರು.
ಪೊಲಾರ್ಡ್ ಅತಿ ವೇಗದ ಅರ್ಧ ಶತಕ ದಾಖಲೆ
Advertisement. Scroll to continue reading.
ಮುಂಬೈ ಇಂಡಿಯನ್ಸ್ ಆಲ್ ರೌಂಡರ್, ವೆಸ್ಟ್ ಇಂಡೀಸ್‌ನ ಪ್ರಮುಖ ಆಟಗಾರ ಕೀರನ್ ಪೊಲಾರ್ಡ್ ಅತೀ ವೇಗದ ಅರ್ಧ ಶತಕ ದಾಖಲೆ ನಿರ್ಮಿಸಿದ್ದಾರೆ. ಕೇವಲ 17 ಎಸೆತಗಳಲ್ಲಿ ಪೊಲಾರ್ಡ್ 50 (ಅಸಲಿಗೆ 17 ಎಸೆತಗಳಲ್ಲಿ 53 ರನ್) ರನ್ ಬಾರಿಸಿ ದಾಖಲೆ ಬರೆದಿದ್ದಾರೆ.
ಇದರಲ್ಲಿ 6 ಫೋರ್ಸ್, 8 ಸಿಕ್ಸರ್ ಸೇರಿತ್ತು. ಅಲ್ಲದೆ ಐಪಿಎಲ್‌ನಲ್ಲಿ ವೇಗದ ಅರ್ಧಶತಕ ದಾಖಲೆಗಾಗಿಯೂ ಪೊಲಾರ್ಡ್ ಹೆಸರು ಸ್ಥಾಯಿಯಾಗಿದೆ.