ಬೆಂಗಳೂರು : ರಾಜ್ಯದ 6 ಜಿಲ್ಲೆಗಳಿಗೆ, ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ, ರಾಜ್ಯ ಸರ್ಕಾರ ಆದೇಶಿಸಿದೆ. ಬೆಳಗಾವಿ, ಬಾಗಲಕೋಟೆ, ಬೀದರ್, ಕೋಲಾರ, ಕಲಬುರ್ಗಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ
ಸಚಿವ ಎಸ್. ಅಂಗಾರ ಅವರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ – ಬೆಳಗಾವಿ
ಸಚಿವ ಉಮೇಶ್ ಕತ್ತಿ – ಬಾಗಲಕೋಟೆ
ಸಚಿವ ಅರವಿಂದ ಲಿಂಬಾವಳಿ – ಬೀದರ್
ಸಚಿವ ಎಂಟಿಬಿ ನಾಗರಾಜ್ – ಕೋಲಾರ
ಸಚಿವ ಮುರುಗೇಶ್ ನಿರಾಣಿ – ಕಲಬುರ್ಗಿಯ ಉಸ್ತುವಾರಿ ಸಚಿವರನ್ನಾಗಿ ಆಯ್ಕೆ ಮಾಡಲಾಗಿದೆ.
ಮುಂದಿನ ಆದೇಶದವರೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ ಆದೇಶಿಸಲಾಗಿದೆ.
Advertisement. Scroll to continue reading.