ಕೈ ತೊರೆದು ಕಮಲ ಹಿಡಿದಿದ್ದ ಪ್ರತಾಪ್ ಗೌಡ ಪಾಟೀಲ್ ಅವರಿಗೆ ಮಸ್ಕಿ ಕ್ಷೇತ್ರದಲ್ಲಿ ಸೋಲಾಗಿದೆ. ಮಸ್ಕಿಯಲ್ಲಿ ಈ ವರೆಗೆ ಮೂರು ಚುನಾವಣೆಯಲ್ಲಿ ಗೆದ್ದಿದ್ದ ಪ್ರತಾಪ್ ಗೌಡ ಪಾಟೀಲ್, ಕಾಂಗ್ರೆಸ್ಸಿನ ಬಸವನಗೌಡ ತುರ್ವಿಹಾಳ ವಿರುದ್ಧ ಸೋತು ಮುಖಭಂಗವಾಗಿದೆ. ಕ್ಷೇತ್ರದ ಉಸ್ತುವಾರಿ ಹೊತ್ತಿದ್ದ ಯಡಿಯೂರಪ್ಪ ಪುತ್ರ ವಿಜಯೇಂದ್ರ ಗೇಂ ಪ್ಲ್ಯಾನ್ ವರ್ಕೌಟ್ ಅಗಿಲ್ಲ. ಕಳೆದ ಚುನಾವಣೆಯಲ್ಲಿ ತುರ್ವಿಹಾಳ ವಿರುದ್ಧ ಪ್ರತಾಪ್ ಗೌಡ 213 ಮತಗಳ ಅಂತರದ ಗೆಲುವು ಪಡೆದಿದ್ದರು.
ಬಸವನಗೌಡ ಈ ಬಾರಿ 30,600 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.