ಮೊರಾಕೊ : ಮಹಿಳೆಯೊಬ್ಬರು ಒಂಭತ್ತು ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಮಾಲಿಯಲ್ಲಿ ನಡೆದಿದೆ. 25 ವರ್ಷದ ಹಲೀಮಾ ಸಿಸ್ಸೆ ಆ ಮಹಾ ತಾಯಿ. ಸ್ಕ್ಯಾನ್ ಸಮಯದಲ್ಲಿ ವೈದ್ಯರು 7 ಮಕ್ಕಳು ಜನಿಸಲಿವೆ ಎಂದು ತಿಳಿಸಿದ್ದಾರೆ. ಅಡಗಿದ್ದ ಎರಡು ರ್ಭರೂಣಗಳು ವೈದ್ಯರ ಕಣ್ಣಿಗೆ ಕಂಡಿರಲಿಲ್ಲ. ಸಿಸೇರಿಯನ್ ಶಸ್ತ್ರ ಚಿಕಿತ್ಸೆ ಮೂಲಕ ಒಂಭತ್ತು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಐದು ಹೆಣ್ಣು ಮಕ್ಕಳು ಮತ್ತು ನಾಲ್ಕು ಗಂಡು ಮಕ್ಕಳು ಜನಿಸಿದ್ದು, ಮಹಾತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ ಂದು ಮಾಳೀ ಆರೋಗ್ಯ ಸಚಿವೆ ಫಾಂಟಾ ಸಿಬಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸದ್ಯಕ್ಕೆ ಈ ಘಟನೆ ಅಚ್ಚರಿ ಹುಟ್ಟು ಹಾಕಿದೆ.