ಕೊರೋನಾದಿಂದಾಗಿ ತಮಿಳಿನ ಹಿರಿಯ ನಟ ಪಾಂಡು ನಿನ್ನೆ ಮೃತಪಟ್ಟಿದ್ದಾರೆ. ಅದೇ ದಿನ ಖ್ಯಾತ ಗಾಯಕ ಕೋಮಗನ್ ಸಹ ಕೊರೋನಾದಿಂದ ಮೃತಪಟ್ಟಿದ್ದಾರೆ. ನಟ ಪಾಂಡು ಅವರಿಗೆ 74 ವರ್ಷ ವಯಸ್ಸಾಗಿತ್ತು. ಅವರ ಪತ್ನಿಯೂ ಕೊರೋನಾ ಸೋಂಕಿನಿಂದ ಗಂಭೀರ ಸ್ಥಿತಿಯಲ್ಲಿದ್ದಾರೆ. 1970 ಸಿನಿಮಾ ರಂಗಕ್ಕೆ ಬಂದಿದ್ದ ಪಾಂಡು ಅವರು ಇತ್ತೀಚೆಗೆ ನಿಲಯ್ ಮಾರು ಮೊದಲಾದ ಚಿತ್ರದಲ್ಲಿ ನಟಿಸಿದ್ದರು.
ಗಾಯಕ ಕೋಮಗನ್ ದೃಷ್ಟಿಹೀನರಾಗಿದ್ದು, ತಮಿಳಿನ ಆಟೋಗ್ರಾಫ್ ಚಿತ್ರದ ಒವ್ವೊರು ಪುಕಲಮಯ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ರಾಗಪ್ರಿಯ ಎಂಬ ಅಂಧರ ತಂಡ ಕಟ್ಟಿಕೊಂಡು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಅಂಗವಿಕಲ ಕ್ಷೇಮಾಭಿವೃದ್ಧಿ ಇಲಾಖೆಯಲ್ಲಿಯೂ ಕೆಲಸ ಮಾಡಿದ್ದು, ಎಐಎಡಿಎಂಕೆ ಪಕ್ಷದ ಚಿಹ್ನ ರಚಿಸಿದವರು ಕೊಮಗನ್ ಅವರೇ ಎಂಬುದು ವಿಶೇಷ.
Advertisement. Scroll to continue reading.