ಅಹ್ಮದಾಬಾದ್ : ಐಪಿಎಲ್ ನ ಕೋಲ್ಕತ್ತಾ ನೈಟ್ ರೈಡರ್ಸ್ ನ ನ್ಯೂಜಿಲೆಂಡ್ ಬ್ಯಾಟ್ಸ್ ಮನ್ ಟಿಮ್ ಸೀಫರ್ಟ್ ಗೆ ಕೊರೋನಾ ಸೋಂಕು ತಗುಲಿದೆ. ಒಟ್ಟು ಕೋಲ್ಕತ್ತಾ ತಂಡದ ಮೂವರಿಗೆ ಕೊರೋನಾ ಸೋಂಕು ತಗುಲಿದೆ. ಐಪಿಎಲ್ ನಡೆಯುತ್ತಿದ್ದಂತೆ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್ ಗೆ ಸೋಂಕು ತಗುಲಿತ್ತು.
ಐಪಿಎಲ್ 2021 ರದ್ದಾಗಿರುವುದರಿಂದ ವಿದೇಶಿ ಆಟಗಾರರೆಲ್ಲ ತಮ್ಮ ತಮ್ಮ ದೇಶಗಳಿಗೆ ವಾಪಾಸಾಗುತ್ತಿದ್ದಾರೆ. ಆದರೆ, ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮನ್ ಸೀಫರ್ಟ್ ಚಾರ್ಟರ್ಡ್ ವಿಮಾನದಲ್ಲಿ ಇತರ ಆಟಗಾರರೊಂದಿಗೆ ವಾಪಾಸು ಹೋಗಲು ಅಸಾಧ್ಯವಾಗಿದೆ.