ಕೊಲೊರಾಡೋ : ಬಂದೂಕುಧಾರಿಯೊಬ್ಬ ಬರ್ತ್ ಡೇ ಪಾರ್ಟಿಯಲ್ಲಿ ಗುಂಡಿನ ಮಳೆಗರೆದಿದ್ದು, 7 ಮಂದಿ ಸಾವನ್ನಪ್ಪಿರುವ ಘಟನೆ ಸ್ಪ್ರಿಂಗ್ಸ್ ನ ಪೂರ್ವ ಭಾಗದಲ್ಲಿರುವ ಮೊಬೈಲ್ ಹೋಮ್ ಪಾರ್ಕ್ ನಲ್ಲಿ ನಡೆದಿದೆ. ತನ್ನ ಪ್ರೇಯಸಿ ಭಾಗಿಯಾಗಿದ್ದ ಪಾರ್ಟಿಯಲ್ಲಿ ನಿನ್ನೆ(ಭಾನುವಾರ) ಮಧ್ಯರಾತ್ರಿ ಆತ ಗುಂಡಿನ ದಾಳಿ ನಡೆಸಿದ್ದಾನೆ. ನಂತರ ಆತನೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ.
ಈ ಪಾರ್ಟಿಯಲ್ಲಿ ಕುಟುಂಬ, ಮಕ್ಕಳು ಮತ್ತು ಸ್ನೇಹಿತರು ಸೇರಿದ್ದರು. ಏಕಾಏಕಿ ನುಗ್ಗಿದ ಆರೋಪಿ ಗುಂಡಿನ ಸುರಿಮಳೆಗೈದಿದ್ದಾನೆ. ತಕ್ಷಣ ಮಾಹಿತಿ ತಿಳಿದು ಪೊಲೀಸರು ಆಗಮಿಸಿದ್ದಾರೆ. ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
Advertisement. Scroll to continue reading.