ಉತ್ತರಕನ್ನಡ : ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಬೆಳಗ್ಗಿನಿಂದಲೂ ಲಸಿಕೆ ನೀಡಲು ಪ್ರಾರಂಭವಾಗಿದೆ. ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಯುವಜನರಿಗೆ ಲಸಿಕೆ ನೀಡಲಾಗುತ್ತಿದೆ.
ದಿನಪೂರ್ತಿ ಒಟ್ಟು 150 ಮಂದಿಗೆ ಮಾತ್ರ ಲಸಿಕೆ ನೀಡುವ ಯೋಚನೆ ಇದ್ದು, ಈಗಾಗಲೇ ಸುಮಾರು 95ಕ್ಕಿಂತಲೂ ಮಿಕ್ಕಿ ಯುವಜನರಿಗೆ ಲಸಿಕೆ ನೀಡಲಾಗಿದೆ.
ನಿನ್ನೆ 18 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ತಲಾ 1000 ಲಸಿಕೆ ತರಿಸಲಾಗಿತ್ತು. ಆರೋಗ್ಯ ಸೇತು ಆ್ಯಪ್ ಮೂಲಕ ನೋಂದಾವಣಿ ಮಾಡಿದ ಜನರಿಗೆ ಮಾತ್ರ ಲಸಿಕೆ ವಿತರಿಸಲಾಗುತ್ತಿದ್ದು, ಆ್ಯಪ್ನಲ್ಲಿ ನೀಡಿರುವ ನಂಬರ್ ಆಧಾರದಲ್ಲಿ ಒಬ್ಬೊಬ್ಬರಿಗೆ ಲಸಿಕೆ ನೀಡಲಾಗುತ್ತಿದೆ.
45 ವರ್ಷ ಮೇಲ್ಪಟ್ಟವರಿಗೆ ಆಸ್ಪತ್ರೆಯ ಗ್ರೌಂಡ್ಫ್ಲೋರ್ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಆಸ್ಪತ್ರೆಯ ಫಸ್ಟ್ ಫ್ಲೋರ್ನಲ್ಲಿ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ.
Advertisement. Scroll to continue reading.