ಕೋವಿಡ್ ಬಗ್ಗೆ ಜನರಿಗೆ ಮಾಹಿಒತಿ ನೀಡುವುದು ಪ್ರಮುಖ ಉದ್ದೇಶವಾಗಿದೆ. ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಏಪ್ರಿಲ್ 24 ರಿಂದ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು. ಮೇ 10 ರಿಂದ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಹೀಗಾಗಿ ಕೋವಿಡ್ ಸೋಂಕಿನ ಪ್ರಮಾಣ ತಗ್ಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಅವರು, ಮೇ 5 ರಂದು 50,112 ಪ್ರಕರಣಗಳು ವರದಿಯಾಗಿದ್ದು, ಕಠಿಣ ಕ್ರಮದಿಂದ 39,900ಕ್ಕೆ ಇಳಿಕ ಕಂಡಿದೆ.ಇದು ಸಮಾಧಾನಕರ ಸಂಗತಿಯಾಗಿದೆ. ನಿರ್ಬಂಧದಿಂದಾಗಿ ಪರಿಸ್ಥಿತಿ ಸುಧಾರಿಸುತ್ತಿರುವ ಲಕ್ಷಣ ಕಾಣುತ್ತಿದೆ. ಮೇ 6 ರಂದು 23,000 ಪ್ರಕರಣ ಇದ್ದವು, ಬುಧವಾರದಂದುಅದು 16,280ಕ್ಕೆ ಇಳಿಕೆಯಾಗಿದೆ. ಬೆಂಗಳೂರು ಮತ್ತು ಕಲಬುರಗಿಯಲ್ಲಿ ಮರಣ ಪ್ರಮಾಣ, ಪಾಸಿಟಿವ್ ದರ ಕಡಿಮೆಯಾಗುತ್ತಿದೆ ಎಂದರು.
ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯ ಹೆಚ್ಚಳ
ರಾಜ್ಯಕ್ಕೆ ಆಮ್ಲಜನಕ ಪೂರೈಕೆ ಕಳೆದ ವರ್ಷ ಮಾರ್ಚ್‍ನಲ್ಲಿ ಆರೋಗ್ಯ ಇಲಾಖೆಯ ಆಸ್ಪತ್ರೆಗಳಲ್ಲಿ 1970 ಆಕ್ಸಿನೇಟೆಡ್ ಬೆಡ್‍ಗಳು, 444 ಐಸಿಯುಗಳು, 676 ವೆಂಟಿಲೇಟರ್ ಗಳು ಇದ್ದವು. ಪ್ರಸ್ತುತ 24,000 ಆಕ್ಸಿನೇಟೆಡ್ ಬೆಡ್‍ಗಳು, 1185 ಐಸಿಯು ಬೆಡ್‍ಗಳು, 2019 ವೆಂಟಿಲೇಟರ್‍ಗಳು, 1348 ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ, 4700 ರಿಂದ 9708ಕ್ಕೆ ಹೆಚ್ಚಿಸಲಾಗಿದೆ. ವೆಂಟಿಲೇಟರ್ 348 ರಿಂದ 646ಕ್ಕೆ ಹೆಚ್ಚಿಸಲಾಗಿದೆ. ಆಸ್ಪತ್ರೆಗಳ ಮೂಲ ಸೌಕರ್ಯ ಹೆಚ್ಚಿಸುವ ಕಾರ್ಯ ಮುಂದುವರೆದಿದೆ. ವೆಂಟಿಲೇಟರ್ ಹಾಗೂ ಇತರ ಸೌಲಭ್ಯ ನಿರಂತರ ಹೆಚ್ಚಳವಾಗುತ್ತಿವೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.
ಆಕ್ಸಿಜನ್ ಉತ್ಪಾದನಾ ಘಟಕ ಆರಂಭ
ಖಾಸಗಿ ವೈದ್ಯಕೀಯ ಆಸ್ಪತ್ರೆಗಳು, ಆಕ್ಸಿಜನ್ ಉತ್ಪಾದನೆ ಮಾಡುವ ಆಸ್ಪತ್ರೆಗಳಲ್ಲಿ ಶೇ.70ರಷ್ಟು ಸರ್ಕಾರ ವೆಚ್ಚ ಭರಿಸುತ್ತಿದೆ. ಲಿಕ್ವಿಡ್ ಆಕ್ಸಿಜನ್ ಪೂರೈಕೆ ಹೆಚ್ಚಳ. ಆಕ್ಸಿಜನ್ ಜರನೇಟರ್ ಮೂಲಕ ಆಮ್ಲಜನಕ ಉತ್ಪಾದನೆ. ಆಕ್ಸಿನೇಟರ ಮೂಲಕ ಕಾನ್ಸಂಟ್ರೇಡರ್ ಮೂಲಕ ಆಮ್ಲಜನಕ ಕೊರತೆ ನೀಗಿಸಲು ಪ್ರಯತ್ನ ಮಾಡಲಾಗಿದೆ ಎಂದರು.
ಕೇಂದ್ರ ಸರ್ಕಾರ 965 ಮೆ. ಟನ್ ನಿಂದ 1100ಕ್ಕೆ ಹೆಚ್ಚಿಸಿದೆ. ರಾಜ್ಯದಲ್ಲಿಯೇ 750 ಮೆ. ಟನ್ ದೊರೆಯತ್ತಿದೆ. ವಿಶಾಖಪಟ್ಟಣದಿಂದ 30 ಮೆ.ಟನ್ ದೊರೆಯತ್ತಿದೆ. ಇತರ ರಾಜ್ಯಗಳಿಂದ ದೊರೆಯುವ ಆಮ್ಲಜನಕ ಪಡೆಯಲಾಗಿದೆ. ಬಹ್ರೇನ್ 40, ಕುವೈತ್‍ನಿಂದ 100, ಜೇಮಷೆಡ್ ಪುರದಿಂದ ಟ್ರೇನ್ ಮೂಲಕ 120 ಮೆ.ಟನ್ ಆಮ್ಲಜನಕ ತರಲಾಗಿದೆ. ರಾಜ್ಯದಲ್ಲಿಯೂ ಆಮ್ಲಜನಕ ಉತ್ಪಾದನಾ ಸಾಮಥ್ರ್ಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. 120 ಆಮ್ಲಜನಕ ಉತ್ಪಾದನಾ ಘಟಕ ಆರಂಭಿಸಲಾಗಿದೆ. 65 ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ, 20 ಕೇಂದ್ರ, 20 ಎನ್‍ಎಸ್‍ಯುಐ, ಬೇರೆ ಸಂಸ್ಥೆಗಳ ಮೂಲಕವೂ ಪಡೆಯಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಓಲಾ ಮತ್ತು ಉಬರ್ 1 ಸಾವಿರ ಆಕ್ಸಿಜನ್ ಕಾನ್ಸಂಟ್ರೇಟರ್ ನೀಡುತ್ತಿರುವುದು ಸ್ವಾಗತಾರ್ಹ. ಸಂಚಾರಿ ಆಕ್ಸಿಲೇಟರ್ ಸೂಕ್ತವಾಗಿ ನೆರವಾಗುತ್ತಿವೆ. 10 ಸಾವಿರದವರೆಗೆ ಆಕ್ಸಿಜನ್ ಸಿಲಿಂಡರ್ ಪಡೆಯಲು ತೀರ್ಮಾನಿಸಲಾಗಿದೆ. 730 ಸಿಲಿಂಡರ್ ಕಳೆದ 10 ದಿನದಲ್ಲಿ ಪಡೆಯಲಾಗಿದೆ. 380 ಕೇಂದ್ರ ಸರ್ಕಾರ ಉಳಿದವರು ವಿದೇಶಗಳಿಂದ ಪಡೆಯಲಾಗಿದೆ. 3000 ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ ಎಂದರು. ಇನ್ನೂ 7 ಸಾವಿರ ಕಾನ್ಸಂಟ್ರೇಟರ್ ಹಂಚಿಕೆ ಮಾಡಲಾಗುವುದು ಎಂದರು.
3 ಕೋಟಿ ಲಸಿಕೆ ನೀಡಲು ತೀರ್ಮಾನ
45 ವರ್ಷ ಮೇಲ್ಪಟ್ಟವರಿಗೆ ರಾಜ್ಯ ಸರ್ಕಾರ ಲಸಿಕೆ ಹಂಚಿಕೆ ಮಾಡುತ್ತಿದೆ. 9 ಲಕ್ಷ ಕೋವಿಶೀಲ್ಡ್, 18 ರಿಂದ 44 ವರ್ಷದವರಿಗೆ ಲಸಿಕೆ ನೀಡಲು 3 ಕೋಟಿ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. 2 ಕೋಟಿ ಕೋವಿಶೀಲ್ಡ್ ಹಾಗೂ 1 ಕೋಟಿ ಕೊವ್ಯಾಕ್ಸಿನ್ ಆರ್ಡರ್ ಮಾಡಿದ್ದೇವೆ ಎಂದರು.5 ಲಕ್ಷ ಕೋವಿಶೀಲ್ಡ್, 1.4 ಕೊವ್ಯಾಕ್ಸಿನ್ ಒಟ್ಟು 8.4 ಲಕ್ಷ ಲಸಿಕೆಗಳು ಸದ್ಯ ಲಭ್ಯವಿದೆ ಎಂದು ಇದೇ ವೇಳೆ ಹೇಳಿದ ಸಿಎಂ ಯಡಿಯೂರಪ್ಪ, 14 ಲಕ್ಷ ಫಲಾನುಭವಿಗಳು ಎರಡನೇ ಲಸಿಕೆಗೆ ಅರ್ಹರಾಗಿದ್ದಾರೆ ಎಂದರು. ಏ.20 ರಿಂದ ಮೇ 9 ರವರೆಗೆ 3.01 ಲಕ್ಷ ರೆಮ್ಡೆಸಿವಿಯರ್ ಔಷಧವನ್ನು ಕೇಂದ್ರ ಸರ್ಕಾರ ಸರಬರಾಜು ಮಾಡಿದೆ. ರಾಜ್ಯದಲ್ಲಿ ರೆಮ್ಡೆಸಿವಿಯರ್ ಬೇಡಿಕೆ ಹೆಚ್ಚಿರುವ ಕಾರಣ, ಇನ್ನೂ ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಸಮಾನವಾಗಿ ಹಂಚಿಕೆ ಮಾಡಲು ಕೇಂದ್ರಕ್ಕೆ ಮನವಿ ಮಾಡಿದ್ದು, ಕಠಿಣ ಕ್ರಮ ಕೈಗೊಂಡ ನಂತರ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಜನತೆ ಎಲ್ಲ ನಿಬರ್ಂಧಗಳನ್ನು ಸ್ವೀಕರಿಸಿ ಅಗತ್ಯವಿದ್ದಾಗ ಮಾತ್ರ ಸಂಚರಿಸಲು ಮನವಿ ಮಾಡುತ್ತೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್, ಕಂದಾಯ ಸಚಿವ ಆರ್. ಆಶೋಕ್, ಡಿಸಿಎಂ ಅಶ್ವಥ್ ನಾರಾಯಣ್ ಉಪಸ್ಥಿತರಿದ್ದರು.