ಎತ್ತರದ, ಕಟ್ಟುಮಸ್ತಾದ ಶರೀರ, ಖಡಕ್ ಲುಕ್…ಹೌದು, ಪಕ್ಕಾ ವಿಲನ್! ಸಕತ್ತಾಗೆ ಆ್ಯಕ್ಟ್ ಮಾಡ್ತಾರಲಾ! ಇವ್ರ ನಟನೆ ನೋಡಿದವರೆಲ್ಲಾ ಹೀಗಂತಾ ಉದ್ಘರಿಸದೇ ಇರೋಲ್ಲ. ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿ `ರಾಜ್ ದೀಪಕ್ ಶೆಟ್ಟಿ’ ಮೆರೆಯುತ್ತಿದ್ದಾರೆ. ಸಿನಿರಂಗಕ್ಕೆ ತುಳುನಾಡು ಹಲವು ಪ್ರತಿಭಾನ್ವಿತ ಕಲಾವಿದರನ್ನು ಕೊಟ್ಟಿದೆ. ಈ ಸಾಲಿನಲ್ಲಿ ರಾಜ್ ದೀಪಕ್ ಶೆಟ್ಟಿ ಕೂಡ ಒಬ್ಬರು. ಮಂಗಳೂರಿನ ಪ್ರೇಮ್ ಶೆಟ್ಟಿ ಮತ್ತು ಸರಳ ಶೆಟ್ಟಿ ದಂಪತಿಯ ಪುತ್ರ. ಸಿನಿಮಾ ಕ್ಷೇತ್ರದಲ್ಲಿ ಬೆಳೆಯ ಬೇಕೆಂಬ ಮಹಾದಾಸೆ ಬಣ್ಣದ ಲೋಕದತ್ತ ರಾಜ್ ದೀಪಕ್ ಶೆಟ್ಟಿಯ ಅವರನ್ನು ಕರೆದೊಯ್ಯಿತು. ಜೊತೆಗೆ ಸಾಮಾಜಿ ಕಾರ್ಯದಲ್ಲೂ ತೊಡಗಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಕಿರುತೆರೆಯಿಂದ ಹಿರಿತೆರೆಗೆ
ಶಾಲಾ, ಕಾಲೇಜು ದಿನಗಳಲ್ಲಿ ನಾಟಕ, ನೃತ್ಯಗಳಲ್ಲಿ ರಾಜ್ ದೀಪಕ್ ಶೆಟ್ಟಿ ಭಾಗಿಯಾಗುತ್ತಿದ್ದರು. ಹೀಗಾಗಿ ಸಹಜವಾಗೆ ನಟನೆಯತ್ತ ರಾಜ್ ದೀಪಕ್ ಶೆಟ್ಟಿ ಅವರು ಹೊರಳಿದರು. ಕಾದಂಬರಿ, ಪ್ರೀತಿ ಇಲ್ಲದ ಮೇಲೆ, ನಿಗೂಢ, ಬಂದೇ ಬರುತಾವ ಕಾಲ, ಮುತ್ತಿನ ತೆನೆ, ಲವ್ ಲವಿಕೆ, ನಿಹಾರಿಕಾ ಮೊದಲಾದ ಧಾರವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ.
2017ರಲ್ಲಿ ತೆರೆಗೆ ಬಂದ ನಂದಕಿಶೋರ್ ನಿರ್ದೇಶನದ ಟೈಗರ್', ಶಿವರಾಜ್ ಕುಮಾರ್ ನಟನೆಯ
ಶ್ರೀಕಂಠ’, ದ್ರುವ ಸರ್ಜಾ ನಟನೆಯ ಚೇತನ್ ಕುಮಾರ್ ನಿರ್ದೇಶನದ ಭರ್ಜರಿ' ಚಿತ್ರಗಳ ಮೂಲಕ ರಾಜ್ ದೀಪಕ್ ಶೆಟ್ಟಿ ಗಮನ ಸೆಳೆದರು. ಅದೇ ವರ್ಷ ತೆರೆ ಕಂಡ
ಗೌಡ್ರು ಹೋಟೆಲ್’, `ಅಸತೋಮ ಸದ್ಗಮಯಾ’ ಚಿತ್ರಗಳಲ್ಲೂ ರಾಜ್ ದೀಪಕ್ ಶೆಟ್ಟಿ ಸಿನಿಪ್ರಿಯರ ಗಮನ ಸೆಳೆದರು.
ವಾಸು ನಾನ್ ಪಕ್ಕಾ ಕಮರ್ಷಿಯಲ್, ಪ್ರಯಾಣಿಕರ ಗಮನಕ್ಕೆ, ಲೈಫ್ ಜೊತೆ ಒಂದು ಸೆಲ್ಫಿ, ರಗಡ್, ಪಂಚತಂತ್ರ, ಅಮರ್, ಭರಾಟೆ, ಬಜಾರ್, ಆಪರೇಷನ್ ನಕ್ಷತ್ರ, ಆದಿ ಲಕ್ಷ್ಮಿ ಪುರಾಣ ಸಿನಿಮಾಗಳಲ್ಲಿ ಮಿಂಚಿದ್ದಾರೆ.
ಪರಭಾಷೆಯಲ್ಲೂ ಬೇಡಿಕೆಯ ನಟ
Advertisement. Scroll to continue reading.
ಕನ್ನಡ ಮಾತ್ರವಲ್ಲ ರಾಜ್ ದೀಪಕ್ ಶೆಟ್ಟಿ ಪರಭಾಷೆಯಲ್ಲೂ ತಮ್ಮ ಛಾಪನ್ನು ಹಬ್ಬಿದ್ದಾರೆ. ತಮಿಳು, ತೆಲುಗಿನಲ್ಲೂ ಮೋಡಿ ಮಾಡುತ್ತಿದ್ದಾರೆ ರಾಜ್.
ಐಸ್ಮಾರ್ಟ್ ಶಂಕರ್,'
ಗಾಡ್ಸ್ ಆಫ್ ಧರ್ಮಪುರಿ’, ಬ್ಯಾಟರಿ',
ವಿರಾಟಪರ್ವಂ’, `ನಾರಪ್ಪ’ ಚಿತ್ರಗಳಲ್ಲಿ ತುಳುನಾಡ ಕುವರ ಪಾತ್ರವಾಗಿದ್ದಾರೆ.
ಸಿನಿಮಾದಲ್ಲಿ ವಿಲನ್, ರಿಯಲ್ ನಲ್ಲಿ ಹೀರೋ
ಮುಖಕ್ಕೆ ಬಣ್ಣ ಬಳಿದು ವಿಲನ್ ಆಗಿ ಅಬ್ಬರಿಸುವುದು ಸಿನಿಮಾಗಳಲ್ಲಿ ಅಷ್ಟೇ, ನಿಜ ಜೀವನದಲ್ಲಿ ಸಹೃದಯಿ ರಾಜ್ ದೀಪಕ್ ಶೆಟ್ಟಿ. ಕಷ್ಟದಲ್ಲಿರುವವರ ಕರೆಗೆ ಓ ಎನ್ನದೇ ಇರಲ್ಲ. ಬೀದಿ ನಾಯಿಗಳಿಗೆ, ಬೆಕ್ಕುಗಳಿಗೆ ಆಹಾರ ಒದಗಿಸುವ ಮಂದಿಗೆ ಪ್ರತೀ ತಿಂಗಳು ಇವರೂ ನೆರವಾಗುತ್ತಾರೆ. ಅಲ್ಲದೇ ಲಾಕ್ ಡೌನ್ ಸಂದರ್ಭದಲ್ಲಿಯೂ ಅನೇಕ ಕುಟುಂಬಗಳಿಗೆ ಸಹಾಯ ಹಸ್ತ ಚಾಚಿದ್ದಾರೆ.
ರಾಜ್ ಗೆ ಪತ್ನಿ ಸೋನಿಯಾ ರೋಡ್ರಿಗಸ್ ಸಾಥ್
ಕಳೆದ ವರ್ಷವಷ್ಟೇ ರಾಜ್ ದೀಪಕ್ ಶೆಟ್ಟಿ ಸೋನಿಯಾ ರೋಡ್ರಿಗಸ್ ಜೊತೆ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ರಾಜ್ ದೀಪಕ್ ಶೆಟ್ಟಿ ಅವರ ಪ್ರತೀ ಕೆಲಸಕ್ಕೂ ಸಂಗಾತಿ ಸೋನಿಯಾ ಜೊತೆಯಾಗುತ್ತಿದ್ದಾರೆ ಇಬ್ಬರೂ ಸೇರಿ ಸಾಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ.
ರಾಜ್ ದೀಪಕ್ ಶೆಟ್ಟಿ ಅವರ ಸಿನಿ ಜೀವನ ಇನ್ನಷ್ಟು ಉತ್ತುಂಗಕ್ಕೆ ಏರಲಿ…ಸಾಮಾಜಿಕ ಕಳಕಳಿ ಹೀಗೆ ಮುಂದುವರೆಯಲಿ…ಎಂಬುದು `ದಿಕ್ಸೂಚಿ ನ್ಯೂಸ್’ ಆಶಯ.
Advertisement. Scroll to continue reading.