ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ ವಿಧಿವಶರಾಗಿದ್ದಾರೆ. ಅವರಿಗೆ 37 ವರ್ಷ ವಯಸ್ಸಾಗಿತ್ತು. ರಸ್ತೆ ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ಅವರು ಬನ್ನೇರುಘಟ್ಟದ ಖಾಸಗಿ ಆಸ್ಪತ್ರೆಯ ಐಸಿಯುವಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಅವರು ಚಿಕಿತ್ಸೆ ಫಲಿಸದೆ ವಿಧಿವಶರಾಗಿದ್ದಾರೆ.
ನಾನು ಅವನಲ್ಲ ಅವಳು ಚಿತ್ರದ ನಟನೆಗೆ ಅವರು ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಸರಳ, ಸಜ್ಜನಿಕೆಯಿಂದ, ತಮ್ಮ ನಟನೆಯಿಂದ, ಸಮಾಜ ಸೇವೆಯಿಂದ ಉತ್ತಮ ಹೆಸರು ಹೊಂದಿದ್ದರು. ರಂಗಪ್ಪಾ ಹೋಗ್ಬಿಟ್ನಾ, ರಾಮ ರಾಮ ರಘು ರಾಮ, ದಾಸವಾಳ, ಹರಿವು, ಒಗ್ಗರಣೆ, ಕಿಲ್ಲಿಂಗ್ ವೀರಪ್ಪನ್, ರಿಕ್ತ, ಅಲ್ಲಮ, ನಾತಿಚರಾಮಿ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಅವರ ಅಂಗಾಂಗ ದಾನ ಮಾಡಲು ಕುಟುಂಬ ನಿರ್ಧರಿಸಿದೆ.
ಕಂಬನಿ ಮಿಡಿದ ಚಿತ್ರರಂಗ, ಅಭಿಮಾನಿಗಳು
Advertisement. Scroll to continue reading.
ಮೇರು ಪ್ರತಿಭೆಯನ್ನು ಕಳೆದುಕೊಂಡ, ಒಬ್ಬ ಉತ್ತಮ ವ್ಯಕ್ತಿಯನ್ನು ಕಳೆದುಕೊಂಡ ದುಃಖ ಇಡೀ ಚಿತ್ರರಂಗವನ್ನು ಕಾಡುತ್ತಿದೆ. ಅಪಘಾತ ಸಂಭವಿಸಿದ ವೇಳೆ ಅವರು ಚೇತರಿಕೊಳ್ಳಬೇಕು ಎಂದು ಎಲ್ಲರೂ ಹರಸಿದ್ದರು, ಹಾರೈಸಿದ್ದರು. ಆದರೆ, ಪ್ರಾರ್ಥನೆ ಫಲಿಸಲಿಲ್ಲ. ಇದೀಗ ಅವರ ಅಭಿಮಾನಿಗಳು, ಚಿತ್ರರಂಗದ ಕಲಾವಿದರು ಕಂಬನಿ ಮಿಡಿಯುತ್ತಿದೆ. ಕಿಚ್ಚ ಸುದೀಪ್ ಸೇರಿದಂತೆ ಹಲವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.