ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಕೋವಿಡ್ ಲಾಕ್ ಡೌನ್ ನ್ನು ಸಡಿಲಗೊಳಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಹೊಸ ಮಾರ್ಗಸೂಚಿಯನ್ನು ಇಂದಿನಿಂದ ಜಾರಿಗೆ ತರಲಾಗಿದೆ. ಹಾಗಾಗಿ ಬದಲಾದ ಮಾರ್ಗ ಸೂಚಿಯನ್ನು ಜನ ಹೇಗೆ ಅನುಸರಿಸುತ್ತಿದ್ದಾರೆ ಎಂಬ ಬಗ್ಗೆ ಸೋಮವಾರ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ ಪರಿಶೀಲನೆ ನಡೆಸಿದರು. ಬ್ರಹ್ಮಾವರ ತಾಲೂಕು ಕಚೇರಿ ರಸ್ತೆಬದಿಯಲ್ಲಿ ಪರವಾನಗೆ ಇಲ್ಲದೆ, ಸಾಮಾಜಿಕ ಅಂತರ ಕಾಪಾಡದೆ ಹಣ್ಣು ತರಕಾರಿ ಮಾರಾಟ ಮಾಡುತ್ತಿದ್ದವರಿಗೆ ಎಚ್ಚರಿಕೆ ನೀಡಲಾಯಿತು. ಮಂಗಳವಾರದಿಂದ ಎಲ್ಲಾ ಅಂಗಡಿಯವರು ಬ್ರಹ್ಮಾವರ ಹೆಬ್ರಿ ರಸ್ತೆ ಬದಿಯಲ್ಲಿ ಅಂತರ ಕಾಪಾಡಿಕೊಂಡು ವ್ಯಾಪಾರ ಮಾಡುವಂತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ತಹಶೀಲ್ದಾರರು ಇಲ್ಲಿನ ಮಹೇಶ್ ಎಂಟರ್ ಪ್ರೈಸಸ್ ಎದುರು ಟ್ರಾಫಿಕ್ ಜಾಮ್ ಆಗಿರುವುದನ್ನು ಕಂಡು, ತಾವೇ ಸ್ವತಃ ರಸ್ತೆಗಿಳಿದು ವಾಹನ ಸಂಚಾರಕ್ಕೆ ನಿರ್ದೇಶನ ನೀಡಿ ವಾಹನ ದಟ್ಟಣೆಯನ್ನು ನಿಯಂತ್ರಿಸಿದರು
Advertisement. Scroll to continue reading.