ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕರಾವಳಿ ಜಿಲ್ಲೆಯಲ್ಲಿ ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರ ಪ್ರದೇಶ ಸ್ಥಬ್ದವಾಗಿದ್ದರೆ, ಗ್ರಾಮೀಣ ಭಾಗದಲ್ಲಿ ಅನ್ನದಾತರು ಭತ್ತದ ನಾಟಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಬಾರಕೂರು ಬಳಿಯ ಕಚ್ಚೂರು , ಹನೆಹಳ್ಳಿ ,ಕೂರಾಡಿ, ಬಂಡೀಮಠ ದ ನದಿ ತೀರದ ಕೃಷಿ ಭೂಮಿಯಲ್ಲಿ ನೆರೆಯ ಹಾವಳಿ ಇರುವ ಕಡೆಯಲ್ಲಿ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡ ದೃಶ್ಯ ಭಾನುವಾರ ಎಲ್ಲೆಡೆಯಲ್ಲಿ ಕಂಡು ಬರುತ್ತಿದೆ .
ತಗ್ಗು ಪ್ರದೇಶ ಮತ್ತು ಯಂತ್ರಗಳು ಹೋಗಲು ದಾರಿಯ ಸಮಸ್ಯೆಯಿಂದ ಯಾಂತ್ರೀಕೃತ ಕೃಷಿ ಮಾಡಲು ಅಸಾಧ್ಯವಾಗಿ ಈ ಭಾಗದ ಜನರು ಪರಸ್ಪರ ಕೃಷಿಕರ ಸಹಕಾರದೊಂದಿಗೆ ಇಂದಿಗೂ ಸಾಂಪ್ರದಾಯಿಕ ನಾಟಿ ಮಾಡುತ್ತಾರೆ.
ಭಾನುವಾರ ಕೂರಾಡಿ ಕೆಳ ಬೈಲಿನ ಸಿದ್ದು ಮರಕಾಲ್ತಿ ಮತ್ತು ಗೋವಿಂದ ಮರಕಾಲರ ಕೃಷಿ ಭೂಮಿಯಲ್ಲಿ 25 ಮಂದಿ ಮಹಿಳೆಯರು ನಾಟಿ ಕಾರ್ಯದಲ್ಲಿದ್ದರು. ಚಿಕ್ಕ ಮಕ್ಕಳು ಆಟ ಆಡುವಂತೆ ನೇಜಿಯನ್ನು ಕೊಂಡು ಹೋಗುತ್ತಿರುವ ದೃಶ್ಯ ಮತ್ತು ಪುರುಷರು ನೇಜಿ ತೆಗೆಯುತ್ತಿರುವುದು, 40 ವರ್ಷ ದಾಟಿದ ನಾರಿಯರು, ಪುರುಷರು ಕೆಸರು ಗದ್ದೆಯಲ್ಲಿ ಕಂಡು ಬರುತ್ತಾರೆ. ಹೊರತು, ಯುವ ಜನತೆ ಗದ್ದೆಯಲ್ಲಿ ಕಂಡು ಬರುತ್ತಿಲ್ಲ .
ಆದರೂ ಲಾಭ ನಷ್ಟದ ಲೆಕ್ಕಾಚಾರ ಮಾಡದೆ ಕೃಷಿ ಭೂಮಿಯನ್ನು ಹಡಿಲು ಬಿಡದೆ ಕೃಷಿ ಮಾಡುತ್ತಿದ್ದು ದೇಶದ ಆಹಾರ ಉತ್ಪಾದನೆಯ ಹೆಚ್ಚಳಕ್ಕೆ ತೊಡಗಿಸಿಕೊಂಡಿದ್ದಾರೆ ಅನ್ನದಾತರು.
Advertisement. Scroll to continue reading.