ಪಡುಬಿದ್ರಿ: ಪಡುಬಿದ್ರಿ ಬೀಚ್ ಹಾಗೂ ಕಾಡಿಪಟ್ಣ ಪರಿಸರದಲ್ಲಿ ಬುಧವಾರ ಬೆಳಗ್ಗೆಯಿಂದ ಕಡಲ್ಕೊರೆತ ಕಾಣಿಸಿಕೊಂಡಿದೆ. ಸಮುದ್ರದಲ್ಲಿ ಗಾಳಿಯ ಒತ್ತಡ ಉಂಟಾಗಿದ್ದು, ಈ ಭಾಗದಲ್ಲಿ ಅಬ್ಬರದ ತೆರೆಗಳು ತೀರವನ್ನು ಅಪ್ಪಳಿಸುತ್ತಿದೆ. ಪರಿಣಾಮ ತೆಂಗಿನ ಮರಗಳು ಸಮುದ್ರ ಪಾಲಾಗಿದ್ದು, ಇನ್ನಷ್ಟು ತೆಂಗಿನ ಮರಗಳು ಸಮುದ್ರದ ಒಡಲು ಸೇರುವ ಭೀತಿಯಲ್ಲಿದೆ. ಕಡಲ್ಕೊರೆತಕ್ಕೆ ನಿರ್ಮಿಸಿದ ತಡೆಗೋಡೆಯ ಕಲ್ಲುಗಳು ಸಮುದ್ರ ಪಾಲಾಗುತ್ತಿವೆ.
ಪಡುಬಿದ್ರಿ ಬೀಚ್ ನಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ 25 ಲಕ್ಷ ರೂ. ವೆಚ್ಚದಲ್ಲಿ ಹಾಸಲಾಗಿರುವ ಇಂಟರ್ಲಾಕ್, ವೀಕ್ಷಣಾ ಗೋಪುರ ಮುಂತಾದ ಕಾಮಗಾರಿಗಳೂ ಸಮುದ್ರದೊಡಲು ಸೇರುವ ಸಂಭವವಿದೆ. ಸ್ಥಳೀಯರು ಆತಂತಕ್ಕೊಳಗಾಗಿದ್ದಾರೆ.
Advertisement. Scroll to continue reading.