ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕೇದಾರೋತ್ಥಾನ ಟ್ರಸ್ಟ್ ಸಹಯೊಗದಲ್ಲಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಉಡುಪಿ ವಿಧಾನ ಸಭಾ ಕ್ಷೇತ್ರವ್ಯಾಪ್ತಿಯಲ್ಲಿ ನಡೆಯುವ ಹಡಿಲು ಭೂಮಿ ಕೃಷಿ ಆಂದೋಲನ ಕಾರ್ಯಕ್ರಮಕ್ಕೆ ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಭೇಟಿ ನೀಡಿದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರಕ್ಕೆ ಆಗಮಿಸಿದ ಅವರು, ಇಲ್ಲಿ ಯಾಂತ್ರೀಕೃತವಾಗಿ ಮಾಡಲಾದ ಭತ್ತದ ಸಸಿಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಕೃಷಿ ಮಹಾವಿದ್ಯಾಲಯಕ್ಕಾಗಿ ಬೇಡಿಕೆ ಮನವಿಯನ್ನು ಸ್ವೀಕರಿಸಿ ಮಾತಾಡಿದ ಅವರು, ಕೃಷಿ ಕೇಂದ್ರದ ಪ್ರಗತಿಗೆ ಶ್ರಮಿಸಲಾಗುವುದು ಮತ್ತು ಕೃಷಿ ಮಹಾವಿದ್ಯಾಲಯ ಸ್ಥಾಪಿಸುವ ಕುರಿತು ರಾಜ್ಯ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ ಎಂದರು.
Advertisement. Scroll to continue reading.
ಈ ಸಂದರ್ಭ ಶಾಸಕ ರಘುಪತಿ ಭಟ್, ಕೃಷಿ ಸಂಶೋಧನ ನಿರ್ದೇಶಕ ಡಾ ಹನುಮಂತಪ್ಪ, ಡಾ. ಲಕ್ಷಣ, ಡಾ ಧನಂಜಯ, ಡಾ. ಸುಧೀರ ಕಾಮತ್ ಮತ್ತು ಇನ್ನಿತರ ಅಧಿಕಾರಿಗಳು, ವಿಜ್ಞಾನಿಗಳು ಹಾಜರಿದ್ದರು.