ನವದೆಹಲಿ: ಹಿಂದಿ ಚಿತ್ರರಂಗದ ದಿಗ್ಗಜ ದಿಲೀಪ್ ಕುಮಾರ್ ಬುಧವಾರ ಬೆಳಗ್ಗೆ 7:30ಕ್ಕೆ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಬಹುಕಾಲದ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಹಲವು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 30 ರಂದು ಮುಂಬೈನ ಹಿಂದೂಜಾ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಲಾಗಿತ್ತು
ಮೊದಲ ಫಿಲಂಫೇರ್ ಪಡೆದ ನಟ :
ಬಾಲಿವುಡ್‌ನ ‘ಟ್ರಾಜಿಡಿ ಕಿಂಗ್’ ಎಂದೇ ಕರೆಯಲ್ಪಡುವ ಹಿರಿಯ ನಟ ಆರು ದಶಕಗಳವರೆಗಿನ ತಮ್ಮ ವೃತ್ತಿಜೀವನದಲ್ಲಿ 65 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ
Advertisement. Scroll to continue reading.
‘ದೇವದಾಸ್’ , ‘ನಯಾ ದೌರ್’ , ‘ಮೊಘಲ್-ಎ-ಅಜಮ್’, ‘ಗಂಗಾ ಜಮುನಾ’ , ‘ಕ್ರಾಂತಿ’, ‘ಕರ್ಮ’, ‘ಅಂದಾಜ್’, ‘ಸೌದಾಗರ್’, ‘ಮಸಾಲ್’, ‘ಶಕ್ತಿ’ ಮೊದಲಾದ ಚಿತ್ರಗಳಲ್ಲಿ ದಿಲೀಪ್ ನಟಿಸಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ, ದಿಲೀಪ್ ಕುಮಾರ್ ಕೊನೆಯ ಬಾರಿಗೆ 1998 ರಲ್ಲಿ ‘ಕಿಲಾ’ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಫಿಲಂಫೇರ್ ಪ್ರಶಸ್ತಿ ಆರಂಭಗೊಂಡಾಗ ಮೊದಲ ಫಿಲಂಫೇರ್ ಪಡೆದ ಖ್ಯಾತಿ ದಿಲೀಪ್ ಕುಮಾರ್ ರದು.
ಪ್ರಧಾನಿ ಮೋದಿ ಸಂತಾಪ :
ದಿಲೀಪ್ ಕುಮಾರ್ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು, ದಿಲೀಪ್ ಕುಮಾರ್ ಅವರನ್ನು ಸಿನಿಮೀಯ ದಂತಕಥೆ ಎಂದು ಸ್ಮರಿಸಲಾಗುತ್ತದೆ. ದಿಲೀಪ್ ಅವರು ಸಾಟಿಯಿಲ್ಲದ ಪ್ರತಿಭೆಯನ್ನು ಹೊಂದಿದ್ದರು. ಈ ಕಾರಣದಿಂದಲೇ ಸಾಕಷ್ಟು ಪ್ರೇಕ್ಷಕರ ಮನಗೆದ್ದಿದ್ದರು. ಅವರ ನಿಧನ ನಮ್ಮ ಸಾಂಸ್ಕೃತಿಕ ಜಗತ್ತಿಗೆ ಆಗಿರುವ ದೊಡ್ಡ ನಷ್ಟವಾಗಿದೆ ಎಂದು ಟ್ವೀಟ್ ಮಾಡಿದ್ದು, ಸಂತಾಪ ಸೂಚಿಸಿದ್ದಾರೆ.